ಬೆಂಗಳೂರು : ಸತತ 10 ಜಯದೊಂದಿಗೆ ಅಜೇಯವಾಗಿ ಫೈನಲ್ ಏರಿದ ಭಾರತ ಕ್ರಿಕೆಟ್ ತಂಡ ಇಂದು ಅಹಮದಾಬಾದಿನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ವಿಶ್ವಕಪ್ ಪಂದ್ಯಾಟದ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಆಸ್ಟ್ರೇಲಿಯಾವನ್ನು ಮತ್ತೊಮ್ಮೆ ಭೇಟೆಯಾಡುವ ಮೂಲಕ ಮೂರನೇ ಬಾರಿ ಮತ್ತು ತವರಿನಲ್ಲಿ ಎರಡನೇ ಬಾರಿ ವಿಶ್ವಕಪ್ ಗೆ ಮುತ್ತಿಡಲು ಟೀಮ್ ಇಂಡಿಯಾ ಸಜ್ಜಾಗಿದೆ
12 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಆಡಲಿರುವ ಭಾರತಕ್ಕೆ 10 ವರ್ಷಗಳ ಐಸಿಸಿ ಟ್ರೋಫಿ ಬರವನ್ನು ನೀಗಿಸುವ ಅವಕಾಶವಿದ್ದು ಈ ನಿಟ್ಟಿನಲ್ಲಿ ಭಾರತದ ವಿಶ್ವಕಪ್ ವಿಜೇತ ನಾಯಕರಾದ ಕಪಿಲ್ ದೇವ್ ಎಂ ಎಸ್ ಧೋನಿ ಸಾಲಿಗೆ ರೋಹಿತ್ ಶರ್ಮ ಕೂಡ ಸೇರುವುದಕ್ಕೆ ತುದಿ ಕಾಲಿನಲ್ಲಿ ನಿಂತಿದ್ದಾರೆ ವಿಶ್ವ ಕಪ್ ಟೂರ್ನಿಯೂದ್ಧಕ್ಕೂ ರೋಹಿತ್ ಶರ್ಮ ಪಡೆ ತೋರಿರುವ ಬಲಿಷ್ಠ ಆಟ ಗಮನಿಸಿದಾಗ ಫೈನಲ್ ಪಂದ್ಯಾಟದಲ್ಲಿ ಭಾರತವೇ ಫೇವರಿಟ್ ಎನ್ನಲಾಗಿದೆ ಟೀಮ್ ಇಂಡಿಯಾ ಎಲ್ಲಾ ವಿಧದಲ್ಲೂ ಪ್ರಾಬಲ್ಯ ಸಾಧಿಸಿದ್ದು ಇಂದು ಭಾರತ ಚಾಂಪಿಯನ್ ಕಿರೀಟ ತೊಡುವುದಕ್ಕೆ ಕ್ಷಣಗಣನೆ ಆರಂಭವಾಗಿದೆ