ರಾಣಿಬೆನ್ನೂರು : ಅಪ್ರಾಪ್ತ ಮಗನಿಗೆ ಬೈಕ್ ನೀಡಿದ ತಂದೆಗೆ ಸ್ಥಳೀಯ ನ್ಯಾಯಾಲಯ 27 ಸಾವಿರ ದಂಡ ವಿಧಿಸಿ ಆದೇಶ ನೀಡಿದೆ. ನಗರದ ದಿಳ್ಳೆಪ್ಪ ಗುತ್ತೆಪ್ಪ ಕಾಟಿ ಎಂಬುವರೇ ದಂಡಕ್ಕೆ ಗುರಿಯಾದ ವ್ಯಕ್ತಿ.
ಇವರು ತಮ್ಮ ಮಗನಿಗೆ ಬೈಕ್ ನೀಡಿದ್ದು ಆತ ಕಳೆದ ಜುಲೈ 30ರಂದು ರಾಣಿಬೆನ್ನೂರು ನಗರದ ಹವಾಲ್ದಾರ್ ಹೊಂಡದ ಹತ್ತಿರ ಮತ್ತೊಂದು ಬೈಕ್ಗೆ ಡಿಕ್ಕಿ ಹೊಡೆದು ಇಬ್ಬರಿಗೆ ಗಾಯಪಡಿಸಿದ್ದನು. ಈ ಕುರಿತು ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಜುಲೈ 1 ರಂದು ದಿಳ್ಳೆಪ್ಪ ಕಾಟೆ ವಿರುದ್ಧ ದೂರು ದಾಖಲಿಸಲಾಗಿತ್ತು. ಹೀಗಾಗಿ 1ನೇ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶರು ಮಗನಿಗೆ ಬೈಕ್ ನೀಡಿದ ತಂದೆ ದಿಳ್ಳೆಪ್ಪ ಕಾಟಿಗೆ 27000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.