Home » ಧರ್ಮಸ್ಥಳ ವಿರುದ್ದದ ಅತಿದೊಡ್ಡ ಷಡ್ಯಂತ್ರ ಬಯಲು : ಅನನ್ಯಾ ಭಟ್ ಕೇಸೇ ಕಟ್ಟುಕತೆ !
 

ಧರ್ಮಸ್ಥಳ ವಿರುದ್ದದ ಅತಿದೊಡ್ಡ ಷಡ್ಯಂತ್ರ ಬಯಲು : ಅನನ್ಯಾ ಭಟ್ ಕೇಸೇ ಕಟ್ಟುಕತೆ !

ನನಗೆ ಅನನ್ಯಾ ಭಟ್ ಎಂಬ ಮಗಳೇ ಇರಲಿಲ್ಲ, ನಾನು ಹೇಳಿದ್ದೆಲ್ಲಾ ಸುಳ್ಳು ಗಿರೀಶ್ ಮಟ್ಟಣ್ಣನವ‌ರ್, ಜಯಂತ್ ಮಾತು ಕೇಳಿ ಸುಳ್ಳು ಹೇಳಿದೆ, ಬಿಟ್ಟುಬಿಡಿ ಧರ್ಮಸ್ಥಳ, ಭಕ್ತರ ಕ್ಷಮೆ ಕೇಳುತ್ತೇನೆ | ಆಸ್ತಿಗಾಗಿ ಸುಳ್ಳು ಹೇಳಿದೆ : ಸುಜಾತಾ

by Kundapur Xpress
Spread the love

ಧರ್ಮಸ್ಥಳ : ಧರ್ಮಸ್ಥಳ ಗ್ರಾಮದಲ್ಲಿ ಹಲವು ಶವಗಳನ್ನು ಹೂತಿಟ್ಟ ಪ್ರಕರಣ ದೇಶಾದ್ಯಂತ ಸದ್ದು ಮಾಡಿದ ಬೆನ್ನಲ್ಲೇ ಅನನ್ಯಾ ಭಟ್ ಎಂಬ ಹೆಸರಿನ ವೈದ್ಯ ವಿದ್ಯಾರ್ಥಿನಿ ನಾಪತ್ತೆ ಕೇಸ್ ಸಹ ಸಾಕಷ್ಟು ಸಂಚಲನ ಮೂಡಿಸಿತ್ತು. ಆ ಕುರಿತಂತೆ ಸ್ಪೋಟಕ ಆರೋಪ ಮಾಡಿದ್ದ ‘ಅನನ್ಯ ಭಟ್’ ತಾಯಿ ಸುಜಾತಾ ಭಟ್ ಈಗ ತಪ್ಪೋಪ್ಪಿಕೊಂಡಿದ್ದು, ‘ನನಗೆ ಅನನ್ಯ ಭಟ್ ಎಂಬ ಮಗಳೇ ಇಲ್ಲ. ನಾನು ಈವರೆಗೂ ಹೇಳಿದ್ದೆಲ್ಲವೂ ಸುಳ್ಳು. ನಾನು ಸೃಷ್ಟಿಸಿದ ಕಟ್ಟುಕತೆ. ಗಿರೀಶ್ ಮಟ್ಟಣ್ಣವರ್, ಟಿ. ಜಯಂತ್ ಅವರು ನನಗೆ ಸುಳ್ಳು ಹೇಳುವಂತೆ ಹೇಳಿಕೊಟ್ಟಿದ್ದರು ಎಂದು ಹೇಳಿದ್ದಾರೆ.

ಮಾಧ್ಯಮಗಳಿಗೆ ಶುಕ್ರವಾರ ಸುಜಾತಾ ಭಟ್ ಸಂದರ್ಶನ ನೀಡಿದ್ದು, ‘ನನಗೆ ಅನನ್ಯಾ ಭಟ್ ಎಂಬ ಮಗಳೇ ಇಲ್ಲ. ನಾನು ನನ್ನ ತಪ್ಪು ಒಪ್ಪಿಕೊಳ್ಳುತ್ತೇನೆ. ಈ ಪ್ರಕರಣದಲ್ಲಿ ನಾನು ಸುಳ್ಳು ಮಾಹಿತಿ ಕೊಟ್ಟಿದಕ್ಕೆ ನನ್ನ ವಯಸ್ಸು ಪರಿಗಣಿಸಿ ಕಾನೂನು ವಿನಾಯಿತಿ ಕೊಡಿ. ಅಲ್ಲದೇ ನಾನು ಜನರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡಿದ್ದಕ್ಕೆ ದೇಶದ ಜನರು, ಧರ್ಮಸ್ಥಳ ಭಕ್ತರಲ್ಲಿ ಕ್ಷಮೆಯಾಚಿಸುತ್ತೇನೆ’ ಎಂದು ಹೇಳಿದ್ದಾರೆ.

ನನಗೆ ಒಬ್ಬಳು ಮಗಳಿದ್ದಳು. ಅವಳನ್ನು ನದಿಯಲ್ಲಿ ತೇಲಿಬಿಟ್ಟಿದ್ದೆ. ಅವಳು ಮೃತಪಟ್ಟಳು ಎಂದೂ ತಿಳಿಸಿದಾರೆ

 

Related Articles

error: Content is protected !!