Home » ನಿರೂಪಕಿ ದಿವ್ಯಾ ವಸಂತ ಬಂಧನ
 

ನಿರೂಪಕಿ ದಿವ್ಯಾ ವಸಂತ ಬಂಧನ

by Kundapur Xpress
Spread the love

ಬೆಂಗಳೂರು : ಇಂದಿರಾ ನಗರದ ‘ಸ್ಟಾ’ ವ್ಯವಸ್ಥಾಪಕನಿಗೆ ಬೆದರಿಸಿ ಹಣ ಸುಲಿಗೆ ಯತ್ನಿಸಿದ ಪ್ರಕರಣ ಸಂಬಂಧ ತಲೆಮರೆಸಿಕೊಂಡಿದ್ದ ನಿರೂಪಕಿ ದಿವ್ಯಾ ವಸಂತ ಹಾಗೂ ಆಕೆಯ ಸ್ನೇಹಿತನನ್ನು ಜೆ.ಬಿ.ನಗರ ಠಾಣೆ ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ.

ಸುಲಿಗೆ ಯತ್ನ ಕೃತ್ಯ ಬೆಳಕಿಗೆ ಬಂದ ನಂತರ ರಾತ್ರೋರಾತ್ರಿ ನಗರ ತೊರೆದು ಹೊರ ರಾಜ್ಯಕ್ಕೆ ದಿವ್ಯಾ ವಸಂತ ಪರಾರಿಯಾಗಿದ್ದಳು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೂರ್ವ ವಿಭಾಗದ ಡಿಸಿಪಿ ಡಿ.ದೇವರಾಜ್, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದರು. ಕೊನೆಗೆ ತಾಂತ್ರಿಕ ಮಾಹಿತಿ ಆಧರಿಸಿ ಕೇರಳದ ಪಾಲಕ್ಕಾಡ್‌ನಲ್ಲಿ ತಲೆಮರೆಸಿಕೊಂಡಿದ್ದ ದಿವ್ಯಾ ವಸಂತ ಹಾಗೂ ಆಕೆಯ ಸ್ನೇಹಿತ ಸಚಿನ್‌ನನ್ನು ಪೊಲೀಸರು ಪತ್ತೆ ಹಚ್ಚಿ ನಗರಕ್ಕೆ ಕರೆತಂದಿದ್ದಾರೆ ತಿಳಿದು ಬಂದಿದೆ.

 

Related Articles

error: Content is protected !!