ಬೆಳಗಾವಿ : ಮೈಸೂರಿನ ಮುಡಾ ಹಗರಣ, ವಕ್ಪ್ ಅವ್ಯವಹಾರಕ್ಕೆ ಸಂಬಂಧಿಸಿದ ಅನ್ವರ್ ಮಾಣಿಪ್ಪಾಡಿ ಅವರ ವರದಿ ಹಾಗೂ ನನ್ನ ಮೇಲಿನ 150 ಕೋಟಿ ರೂ. ಆಮಿಷದ ಆರೋಪ ಇವೆಲ್ಲವನ್ನು ಸಿಬಿಐ ತನಿಖೆ ನಡೆಸುವಂತೆ ಆದೇಶ ಮಾಡಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶಾಸಕ ಬಿ.ವೈ. ವಿಜಯೇಂದ್ರ ಒತ್ತಾಯಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಶುಕ್ರವಾರ ವಿಧಾನಸಭೆ ಕಲಾಪದ ವೇಳೆ ನನ್ನ ಮೇಲೆ ಮಾಡಿದ ಆರೋಪಕ್ಕೆ ಸೋಮವಾರ ಕಲಾಪದ ಆರಂಭದಲ್ಲಿ ಅವರು ಹೇಳಿಕೆ ನೀಡಿದರು.
ಸದನ ನಡೆಯುತ್ತಿರುವಾಗ ನನ್ನ ಅನುಪಸ್ಥಿತಿಯಲ್ಲಿ ಸಚಿವರು ನನ್ನ ಮೇಲೆ 150 ಕೋಟಿ ರೂ. ಆಮಿಷ ವೊಡ್ಡಿರುವ ಆರೋಪ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡ ಆರೋಪಿಸಿದ್ದಾರೆ. ಸಿಬಿಐಗೆ ಒಪ್ಪಿಸಬೇಕೆಂಬ ಮಾತನ್ನಾಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಸಿಬಿಐ ಮೇಲೆ ವಿಶ್ವಾಸ ಬಂದಿರುವುದು ಸಂತೋಷದ ವಿಷಯ ಎಂದರು.