ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲಿನಲ್ಲಿರುವ ದರ್ಶನ್, ಪವಿತ್ರಾಗೌಡ ಸೇರಿ ದಂತೆ 6 ಆರೋಪಿಗಳ ಜಾಮೀನು ಭವಿಷ್ಯ ಇಂದು ಸೋಮವಾರ ನಡೆಯಲಿದೆ.
ದರ್ಶನ್ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಳಿಸಿರು ವ 57ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್, ಈಗಾಗಲೇ ತೀರ್ಪು ಕಾಯ್ದಿರಿಸಿರುವ ರವಿ ಶಂಕರ್, ಲಕ್ಷ್ಮಣ್, ನಾಗರಾಜ್ ಮತ್ತು ದೀಪಕ್ ಅವರ ಅರ್ಜಿಗಳ ತೀಪನ್ನು ಸಹ ಇದೇ ವೇಳೆ ಪ್ರಕಟಿಸಲಿದೆ
ದರ್ಶನ್ ಪರ ಸಿ.ವಿ.ನಾಗೇಶ್ , ಜಾಮೀನು ನೀಡದಂತೆ ಪ್ರಸನ್ನ ಕುಮಾರ್ ಇಬ್ಬರೂ ಪ್ರಬಲವಾದ ವಾದ ಮಂಡಿಸಿದ್ದಾರೆ. ಪೊಲೀಸ್ ತನಿಖೆಯಲ್ಲಿ ಲೋಪ ದೋಷಗಳಿವೆ ಎಂದು ಹಲವು ಅಂಶಗಳನ್ನು ಸಿ.ವಿ.ನಾಗೇಶ್ ಉಲ್ಲೇಖಿಸಿದ್ದಾರೆ.ಅರೇಬಿಯನ್ ನೈಟ್ಸ್ ಕತೆಯಂತೆ ಇದೆ. ತನಿಖೆ ಅತ್ಯಂತ ಕಳಪೆಯಾಗಿದೆ. ಸ್ಥಳ ಮಹಜರು ಮತ್ತು ಪಂಚನಾಮೆಗೆ ಹೋಲಿಕೆಯಿಲ್ಲ ಎಂದು ವಾದಿಸಿದ್ದರು.
ಮತ್ತೊಂದೆಡೆ ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್, ಈ ಕೊಲೆ ಪ್ರಕರಣ ಕ್ರೂರವಾದ ರಕ್ತ ಚರಿತ್ರೆ.ಕೃತ್ಯಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳು, ಫೋಟೋಗಳು ಇವೆ. ಅ ಆರೋಪಿ ದರ್ಶನ್ ಕೊಲೆಯಲ್ಲಿ ಭಾಗಿಯಾಗಿರುವುದಕ್ಕೆ ಪ್ರಬಲ ಸಾಕ್ಷಿಗಳಿವೆ ಎಂದು ವಾದಿಸಿದ್ದರು.
ದರ್ಶನ್, ಪವಿತ್ರಾಗೌಡ ಜಾಮೀನು ಅರ್ಜಿ ತಿರಸ್ಕಾರವಾದರೆ ಅವರಿಬ್ಬರೂ ಹೈಕೋರ್ಟ್ ಮೆಟ್ಟಿಲೇರಬೇಕಾಗುತ್ತದೆ.