ಹಳಿಯಾಳ : ಮನೆಯಲ್ಲಿ ಆಟವಾಡುತ್ತಿದ್ದಾಗ ಬಾಲಕನೋರ್ವನ ಗಂಟಲಿಗೆ ಆಕಸ್ಮಿಕವಾಗಿ ಬಲೂನ್ ಸಿಲುಕಿ ಉಸಿರಾಟ ಸಮಸ್ಯೆಯಾಗಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಜೋಗನ ಕೊಪ್ಪದಲ್ಲಿ ನಡೆದಿದೆ. ನವೀನ ನಾರಾಯಣ ಬೆಳಗಾಂವಕರ (13 ವರ್ಷ) ಮೃತ ಬಾಲಕ
ಬಾಲಕ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಬಲೂನ್ ಊದುವಾಗ ಜಾರಿ ಹೋಗಿ ಗಂಟಲಲ್ಲಿ ಸಿಲುಕಿಕೊಂಡಿದೆ. ಇದರಿಂದ ಉಸಿರಾಟ ತೊಂದರೆಯಾಗಿದೆ. ತಕ್ಷಣ ಹಳಿಯಾಳದ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವೈದ್ಯರು ಗಂಟಲಿಂದ ಬಲೂನು ಹೊರತೆಗೆದಿದ್ದು, ಬಾಲಕ ಆಸ್ಪತ್ರೆಗೆ ತಲುಪುವ ಮುನ್ನವೇ ಕೊನೆಯುಸಿರೆಳೆದಿದ್ದಾನೆಂದು ವೈದ್ಯರು ತಿಳಿಸಿದ್ದಾರೆ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.