ಬೆಂಗಳೂರು : ಪ್ರೀಮಿಯಂ,ಸೆಮಿ ಪ್ರೀಮಿಯಂ ಮದ್ಯದ ದರ ಇಳಿಸಿದ ಬೆನ್ನಲ್ಲೇ ಬಿಯರ್ ದರ ಹೆಚ್ಚಳಕ್ಕೆ ಸರ್ಕಾರ ಮುಂದಾಗಿದ್ದು ಶೀಘ್ರದಲ್ಲೇ ಹೊಸ ದರಗಳು ಅನ್ವಯವಾಗಲಿವೆ.ಬಿಯರ್ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸರ್ಕಾರ ಆ.23 ರಂದೇ ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಆಹ್ವಾನಿಸಿ 15 ದಿನ ಕಾಲಾವಕಾಶ ನೀಡಿತ್ತು.ಹೀಗಾಗಿ ಶೀಘ್ರದಲ್ಲೇ ಬೆಳೆ ಹೆಚ್ಚಳಕ್ಕೆ ಅಸ್ತು ಎಂದಿದ್ದು,10 ರು.ಗಿಂತಲೂ ಹೆಚ್ಚು ದುಬಾರಿಯಾಗಲಿದೆ.ಇದರಿಂದಾಗಿ ಕಳೆದ ಒಂದೂವರೆ ವರ್ಷದಲ್ಲೇ ಮೂರು ಬಾರಿ ದರ ಹೆಚ್ಚಳದ ಶಾಕ್ ಬಿಯರ್ ಪ್ರಿಯರು ಅನುಭವಿಸುವಂತಾಗಿದೆ