Home » ಬಿಜೆಪಿಯಿಂದ ಭೀಮ ಹೆಜ್ಜೆ ರಥಯಾತ್ರೆಗೆ ಚಾಲನೆ
 

ಬಿಜೆಪಿಯಿಂದ ಭೀಮ ಹೆಜ್ಜೆ ರಥಯಾತ್ರೆಗೆ ಚಾಲನೆ

by Kundapur Xpress
Spread the love

ಬೆಂಗಳೂರು : ರಾಜ್ಯದ ನಿಪ್ಪಾಣಿಗೆ ಬಾಬಾಸಾಹೇಬ ಡಾ.ಬಿ.ಆರ್. ಅಂಬೇಡ್ಕರ್ ಭೇಟಿ ನೀಡಿ 100 ವರ್ಷ ಪೂರೈಸಿದ ಸಂಭ್ರಮದ ಹಿನ್ನೆಲೆಯಲ್ಲಿ ಬಿಜೆಪಿ ಬೆಂಗಳೂರಿನಿಂದ ಬೆಳಗಾವಿಯ ನಿಪ್ಪಾಣಿವರೆಗೆ ಹಮ್ಮಿಕೊಂಡಿರುವ ಭೀಮ ಹೆಜ್ಜೆ ರಥಯಾತ್ರೆಗೆ ಚಾಲನೆ ದೊರೆತಿದೆ. 

ಶುಕ್ರವಾರ ವಿಧಾನಸೌಧ ಆವರಣದಲ್ಲಿರುವ ಡಾ. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ರ್ಯಾಲಿ ಉದ್ಘಾಟಿಸಲಾಯಿತು. ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ವಿಧಾನಪರಿಷತ್ ಪ್ರತಿಪಕ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಗೋವಿಂದ ಕಾರಜೋಳ ಸೇರಿ ಹಲವು ಬಿಜೆಪಿ ಮುಖಂಡರು. ದಲಿತ ಸಂಘಟನೆಯ ನಾಯಕರು ಭಾಗವಹಿಸಿದ್ದರು.

ಬಳಿಕ ನಗರದ ಹೊರವಲಯದಲ್ಲಿನ ಅಂತಾರಾ ಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದ ಬಳಿ ಸಮಾವೇಶ ನಡೆಸಿ ಬೈಕ್ ರ್ಯಾಲಿ ಮೂಲಕ ನಿಪ್ಪಾಣಿಗೆ ಪ್ರಯಾಣ ಬೆಳೆಸಲಾಯಿತು. 

 

Related Articles

error: Content is protected !!