118
ಉಡುಪಿ : ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಶುಕ್ರವಾರ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ತದನಂತರ ಗೋಶಾಲೆಗೆ ತೆರಳಿ ಗೋ ಸೇವೆ ಮಾಡಿ, ಗೀತಾಮಂದಿರದಲ್ಲಿ ಪರ್ಯಾಯ ಪುತ್ತಿಗೆ ಮಠದ ಉಭಯ ಶ್ರೀಪಾದರಿಂದ ಅನುಗ್ರಹ ಪ್ರಸಾದ ಸ್ವೀಕಾರ ಮಾಡಿದರು.
ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು ಸಂತೋಷ್ ಅವರಿಗೆ ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು
ಕೋಟಿ ಗೀತಾ ಲೇಖನ ಯಜ್ಞ ಅಭಿಯಾನದ ವಿವರ ಪಡೆದುಕೊಂಡ ಸಂತೋಷ್ ಶ್ರೀಗಳಿಗೆ ವಿಶೇಷ ಅಭಿನಂದನೆ ಸಲ್ಲಿಸಿದರು. ಬಳಿಕ ಗೀತಾ ಮಂದಿರದಲ್ಲಿ ಭಾರತ್ ಮೇಳದ ಅಂಗವಾಗಿ ನಡೆಯುವ ವಿಶೇಷ ವಿಶ್ವರೂಪದ ಪ್ಲಾನಿಟೋರಿಯಂ ಪ್ರದರ್ಶನವನ್ನು ಬಿ. ಎಲ್. ಸಂತೋಷ್ ಉದ್ಘಾಟಿಸಿದರು. ಅಲ್ಲದೇ ಶ್ರೀಕೃಷ್ಣ ಮಹಿಮೆಯ ಸಂಕ್ಷಿಪ್ತ ಚಿತ್ರವನ್ನು ನೋಡಿ ಸಂತಸ ವ್ಯಕ್ತಪಡಿಸಿದರು.

