Home » ಇಂದು ನಾಗಮಂಗಲಕ್ಕೆ ಸತ್ಯ ಶೋಧನಾ ಸಮಿತಿ
 

ಇಂದು ನಾಗಮಂಗಲಕ್ಕೆ ಸತ್ಯ ಶೋಧನಾ ಸಮಿತಿ

by Kundapur Xpress
Spread the love

ಬೆಂಗಳೂರು: ಬಿಜೆಪಿ ಸತ್ಯಶೋಧನಾ ಸಮಿತಿಯು ಸೆ.16ರಂದು ನಾಗಮಂಗಲಕ್ಕೆ ಭೇಟಿ ಕೊಡಲಿದೆ. ಅಲ್ಲಿನ ಮಾಹಿತಿಯನ್ನು ಪಡೆಯಲಿದೆ ಎಂದು ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಲಾಗಿದೆ. ಪಕ್ಷದ ರಾಜ್ಯ ಉಪಾಧ್ಯಕ್ಷ ಬೈರತಿ ಬಸವರಾಜ್, ಮಾಜಿ ಸಚಿವ ನಾರಾಯಣಗೌಡ, ರಾಜ್ಯ ಕಾರ್ಯದರ್ಶಿ ಲಕ್ಷ್ಮೀ ಅಶ್ವಿನ್ ಗೌಡ, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರನ್ನು ಸಮಿತಿ ಒಳಗೊಂಡಿದೆ ಎಂದರು.

ನಾಗಮಂಗಲದಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ. ಪ್ರಾರಂಭದಲ್ಲಿ ಅದೇನೂ ಇಲ್ಲ ಎಂಬಂತೆ ಹೇಳಿಕೆ ಕೊಟ್ಟರು. ಗುಪ್ತಚರ విభాగ ಮುಖ್ಯಸ್ಥರನ್ನು ವರ್ಗಾಯಿಸಿದರು. ಪೊಲೀಸ್ ನಿರೀಕ್ಷಕರನ್ನು ಅಮಾನತು ಮಾಡಿದ್ದು, ಕಾನೂನು-ಸುವ್ಯವಸ್ಥೆ ನಿರ್ವಹಣೆಯ ವೈಫಲ್ಯವು ನಾಗಮಂಗಲ ಘಟನೆ ಮೂಲಕ ವ್ಯಕ್ತವಾಗಿದೆ ಎಂದು ತಿಳಿಸಿದರು. ಇದರ ಹಿಂದೆ ಕೇರಳ, ಎಸ್‌ಡಿಪಿಐನವರಿದ್ದಾರೆಂಬ ಅನುಮಾನಗಳಿವೆ ಎಂದು ವಿವರಿಸಿದರು. ನಾಗಮಂಗಲದಲ್ಲಿ ಒಂದು ಕೋಮಿನವರು ಪ್ರಚೋದನೆ ಮಾಡಿದ್ದಾರೆ. ನಮ್ಮ ಸಂಸ್ಕೃತಿ ಎನಿಸಿದ ವಿನಾಯಕನ ಚತುರ್ಥಿ ಕಾರ್ಯಕ್ರಮವು ದೇಶದ ಸದೃಢತೆಗೆ ಶಕ್ತಿ ತುಂಬುತ್ತದೆ.

ಅಂಥ ಸಂದರ್ಭದಲ್ಲಿ ಅಡಚಣೆ, ಅನಾವಶ್ಯಕವಾಗಿ ತೊಂದರೆ ಕೊಡುತ್ತಿದ್ದು ಇದಕ್ಕೆ ಗೃಹ ಇಲಾಖೆ ಬೆಂಬಲ ಕೊಡುತ್ತಿದೆ. ಈ ಸರ್ಕಾರ ಒಂದು ವರ್ಗ, ಒಂದು ಧರ್ಮಕ್ಕೆ ಸೀಮಿತವಾಗಿ ವರ್ತಿಸುತ್ತಿದೆ. ಎಷ್ಟೋ ಕಡೆ ಗಣೇಶ ಮೂರ್ತಿ ಇಡಲು ಬಿಟ್ಟಿಲ್ಲ, ಮೆರವಣಿಗೆಗೆ ಕಡಿವಾಣ ಹಾಕಿದ್ದಾರೆ. ಪುರಭವನದ ಬಳಿ ಗಣೇಶ ಮೂರ್ತಿಯನ್ನೇ ಬಂಧಿಸಿದ್ದಾರೆ ಎಂದು ಆಕ್ಷೇಪಿಸಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಕಾಪಾಡಲು ವಿಫಲವಾಗಿದೆ. ನೂರಾರು ಘಟನೆಗಳು ಕಣ್ಣೆದುರಿವೆ. ತುಷ್ಟಿಕರಣದ ಪರಿಣಾಮ, ಆಡಳಿತದ ಮೇಲೆ ಹಿಡಿತ ಸ್ಪಷ್ಟತೆ ಇಲ್ಲದ ಕಾರಣ ಸಮಾಜದಲ್ಲಿ ತುಂಬ ಗೊಂದಲ, ಭಯ, ಅತೃಪ್ತಿಯ ವಾತಾವರಣ ನಿರ್ಮಾಣ ಆಗಿದೆ ಎಂದು ಆರೋಪಿಸಿದರು

   

Related Articles

error: Content is protected !!