ಬೆಂಗಳೂರು : ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಹಗರಣಗಳ ವಿರುದ್ದ ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ನ ವಿಧಾನಪರಿಷತ್ ಸದಸ್ಯರು ಶುಕ್ರವಾರ ವಿಧಾನಸೌಧದ ಆವರಣದಲ್ಲಿರುವ ಮಹಾತ್ಮಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ದ ನಾನಾ ಘೋಷಣಾ ಬರಹಗಳಿರುವ ಫಲಕಗಳನ್ನು ಹಿಡಿದು ಸಿ.ಟಿ ರವಿ, ಎನ್.ರವಿಕುಮಾರ್, ಛಲವಾದಿ ನಾರಾಯಣಸ್ವಾಮಿ, ಭಾರತಿ ಶೆಟ್ಟಿ ಭೋಜೇಗೌಡ, ಪ್ರತಾಪ್ ಸಿಂಹ ನಾಯಕ್, ಸಂಕನೂರ್, ಡಿ.ಎಸ್. ಅರುಣ್, ಎಂ.ಜಿ. ಮುಳೆ, ತಳವಾರ ಸಾಬಣ್ಣ ಪ್ರದೀಪ್ ಶೆಟ್ಟರ್, ಕೇಶವ್ ಪ್ರಸಾದ್, ಶಾಂತಾರಾಮ್ ಸಿದ್ದಿ ಸೇರಿ ಹಲವು ಸದಸ್ಯರು ಘೋಷಣೆ ಕೂಗಿದರು.