Home » ಮಾ.03 ರಿಂದ ಬಜೆಟ್ ಅಧಿವೇಶನ : ಖಾದರ್
 

ಮಾ.03 ರಿಂದ ಬಜೆಟ್ ಅಧಿವೇಶನ : ಖಾದರ್

by Kundapur Xpress
Spread the love

ಮಂಗಳೂರು : ಮಾ.3 ರಿಂದ ರಾಜ್ಯ ವಿಧಾನಮಂಡಲದ ಬಜೆಟ್ ಅಧಿವೇಶನ ನಡೆಯಲಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ತಿಳಿಸಿದ್ದಾರೆ.

ಮೊದಲ ದಿನ ರಾಜ್ಯಪಾಲರು ಜಂಟಿ ಸದನವನ್ನು ಉದ್ದೇಶಿಸಿ ಸಂದೇಶ ನೀಡಲಿದ್ದಾರೆ. ಮಾ.3ರಿಂದ 7ರವರೆಗೆ ರಾಜ್ಯಪಾಲರ ಭಾಷಣದ ಬಗ್ಗೆ ಚರ್ಚೆ ನಡೆಯುತ್ತದೆ. ಮಾ.7ರಂದು ಮುಖ್ಯಮಂತ್ರಿ ಬಜೆಟ್ ಮಂಡನೆ ಮಾಡುತ್ತಾರೆ. ಬಳಿಕ ಮಾ.21ರವರೆಗೆ ಬಜೆಟ್ ಮೇಲೆ ಚರ್ಚೆ ಹಾಗೂ ಸರ್ಕಾರದ ಉತ್ತರ ವಿವಿಧ ಬಿಲ್ ಗಳ ಮಂಡನೆ ಇನ್ನಿತರ ಕಾರ್ಯ ಕಲಾಪಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಈಗ ಉದ್ದೇಶಿಸಿರುವ ಪ್ರಕಾರ ಮಾ.3ರಿಂದ 21ರವರೆಗೆ ಅಧಿವೇಶನ ನಡೆಸಲಾಗುತ್ತದೆ. ಮಾ.3ರಂದು ಮಧ್ಯಾಹ್ನ ಬ್ಯುಸಿನೆಸ್ ಅಡ್ಡೆಸರಿ ಕಮಿಟಿ ಸಭೆಯಲ್ಲಿ ಅಧಿವೇಶನದ ಅವಧಿ ಹಾಗೂ ಅಂತಿಮ ರೂಪುರೇಷೆ ಸಿದ್ಧಪಡಿಸಲಾಗುತ್ತದೆ ಎಂದರು.

 

Related Articles

error: Content is protected !!