ಬೆಂಗಳೂರು : ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಬುಧವಾರ ನಡೆದ ಉಪಚುನಾವಣೆಯ ಮತದಾನ ಶಾಂತಿಯುತ ವಾಗಿತ್ತು. ಸವಣೂರು ಕ್ಷೇತ್ರದಲ್ಲಿ ಶೇ.80.48, ಸಂಡೂರು ಕ್ಷೇತ್ರದಲ್ಲಿ ಶೇ.76.24, ಚನ್ನಪಟ್ಟಣ ಕ್ಷೇತ್ರದಲ್ಲಿ ಶೇ.88.80ರಷ್ಟು ಮತದಾನವಾಗಿದೆ. ವಕ್ಪ್ ಅಧ್ವಾನದ ಹಿನ್ನೆಲೆಯಲ್ಲಿ ಸವಣೂರ ಪಟ್ಟಣದ ದಂಡಿನಪೇಟೆಯ ನಿವಾಸಿಗಳು ತಮ್ಮ ಮನೆಗಳ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಮತದಾನ ಬಹಿಷ್ಕರಿಸಿದರು. ತಮ್ಮ ಮನೆಗಳ ಮೇಲೆ ಬ್ಯಾನರ್ ಕಟ್ಟುವ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಮನವೊಲಿಕೆ ನಂತರ ಕೆಲವರು ಮತದಾನಕ್ಕೆ ಮುಂದಾದ ಬಗ್ಗೆ ವರದಿಯಾಗಿದೆ