ಬೆಂಗಳೂರು : ಮಾಧ್ಯಮಗಳು ಮೂಢನಂಬಿಕೆ ಕಂದಾಚಾರಕ್ಕೆ ಪ್ರಚಾರ ಕೊಡದೆ ಊಹಾ ಬರವಣಿಗೆ ಮಾಡದೆ ಮನಃಸಾಕ್ಷಿಗನುಗುಣವಾಗಿ ಸಮಾಜದ ಅಸಮಾನತೆ ಹೋಗಲಾಡಿಸುವ ಕೆಲಸ ಮಾಡಿ ಜನತೆಯ ವಿಶ್ವಾಸಾರ್ಹತೆ ಕಾಪಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆಕೊಟ್ಟರು.
ಬೆಂಗಳೂರು ಪ್ರೆಸ್ ಕ್ಲಬ್ ಕೊಡಮಾಡುವ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯ ಕ್ರಮದಲ್ಲಿ ಭಾನುವಾರ ಅವರು ಮಾತನಾಡಿದರು. ಪತ್ರಕರ್ತರ ಊಹಾ ಬರವಣಿಗೆ ಅಪಾಯಕಾರಿ ಖುರ್ಚಿ ಖಾಲಿ ಇಲ್ಲದಿದ್ದರೂ ಸಿಎಂ ಸ್ಥಾನ ಬದಲಾವಣೆ ಆಗಿ ಬಿಡುತ್ತದೆ ಎಂದು ಬರೆಯುವುದು ಊಟಕ್ಕೆ ಸೇರಿದರೆ ಏನೋ ಬರೆಯುವುದು ಸಭೆಗಳಲ್ಲಿ ನಾವು ಮಾತನಾಡಿರುವುದೇ ಬೇರೆ ಪತ್ರಕರ್ತರು ಊಹೆ ಯಲ್ಲಿ ಬರೆಯುವುದೇ ಬೇರೆ ಇಂಥವುಗಳಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯವೇ ಎಂದು ಪ್ರಶ್ನಿಸಿದರು.
ಸಂವಿಧಾನ, ಪ್ರಜಾಪ್ರಭುತ್ವದ ಮೌಲ್ಯ ಗಳು ಯಶಸ್ವಿ ಆಗಬೇಕಾದರೆ ಮಾಧ್ಯಮಗಳು ಇರಬೇಕು. ಪತ್ರಿಕಾ ಸ್ವಾತಂತ್ರ್ಯವನ್ನು ಸಂವಿಧಾನ ಕೊಟ್ಟಿದೆ. ಜನರನ್ನು ಸರ್ಕಾರವನ್ನು ಎಚ್ಚರಗೊಳಿಸುತ್ತ ಜನರ ದನಿಯಾಗಿ ಮಾಧ್ಯಮಗಳು ಕೆಲಸ ಮಾಡಬೇಕು. ಶಾಸಕಾಂಗ, ಕಾರ್ಯಾಂಗ ನ್ಯಾಯಾಂಗದಿಂದ ನಮಗೆ ರಕ್ಷಣೆ ಸಿಗುತ್ತದೆ ಎಂಬುದನ್ನು ಜನತೆ ಮಾಧ್ಯಮಗಳ ಮೂಲಕ ನೋಡುತ್ತದೆ. ಹೀಗಿರುವಾಗ ಸಮಾಜದಲ್ಲಿ ಬದಲಾವಣೆ ತರುವ, ನ್ಯಾಯ ಒದಗಿಸಿ ಜನರ ವಿಶ್ವಾಸಾರ್ಹತೆ ಉಳಿಸಿಕೊಳ್ಳುವ ಕೆಲಸವನ್ನು ಮಾಧ್ಯಮ ಗಳುಮಾಡಬೇಕು ಎಂದು ಸಿದ್ದರಾಮಯ್ಯ ಕಿವಿಮಾತು ಹೇಳಿದರು.