Home » ವಾಲ್ಮೀಕಿ ನಿಗಮದ ಇಡೀ ಹಗರಣ ಮುಚ್ಚಿ ಹಾಕುವ ಸಂಚು:
 

ವಾಲ್ಮೀಕಿ ನಿಗಮದ ಇಡೀ ಹಗರಣ ಮುಚ್ಚಿ ಹಾಕುವ ಸಂಚು:

 ಸಿ.ಟಿ.ರವಿ ಆರೋಪ

by Kundapur Xpress
Spread the love

ಬೆಂಗಳೂರು : ಎಸ್‍ಐಟಿಯು ನಾಗೇಂದ್ರರ ಹೆಸರನ್ನು ಉಲ್ಲೇಖಿಸದೆ ಇರುವುದು, ನಾಗೇಂದ್ರರನ್ನುತನಿಖೆಗೆ ಒಳಪಡಿಸದೆ ಇರುವುದು ಗಮನಿಸಿದಾಗ ವಾಲ್ಮೀಕಿ ನಿಗಮದ ಇಡೀ ಹಗರಣವನ್ನು ಮುಚ್ಚಿ ಹಾಕುವ ಸಂಚನ್ನು ಮುಖ್ಯಮಂತ್ರಿಗಳು ಸೇರಿದಂತೆ ಪ್ರಮುಖರು ಮಾಡಿದಂತಿದೆ. ಇಲ್ಲವಾದರೆ ಎಸ್‍ಐಟಿ ಮತ್ತು ಇ.ಡಿ. ಚಾರ್ಜ್‍ಶೀಟಿಗೆ ಹೀಗೆ ಅಜಗಜಾಂತರ ಇರಲು ಹೇಗೆ ಸಾಧ್ಯ ಎಂದು ರಾಜ್ಯ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಪ್ರಶ್ನಿಸಿದರು. ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಾಗೆೀಂದ್ರರ ಮೌಖಿಕ ಸೂಚನೆಯ ಕುರಿತುತಿಳಿಸಿದ್ದೆವು. ಚುನಾವಣೆಗೆ ಹಣ ಬಳಕೆ, ಬಾರ್‍ಗಳಿಗೆ ಹಣ ಹೋಗಿರುವುದರ ಕುರಿತು ಆರೋಪಿಸಿದ್ದೆವು. ನೆಕ್ಕುಂಟಿ ನಾಗರಾಜ್ ಮತ್ತು ಸಿದ್ದರಾಮಯ್ಯನವರಿಗೆ ಇರುವ ಸಂಬಂzs À, ಉಪ
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಾಗೇಂದ್ರ- ನೆಕ್ಕುಂಟಿ ಸಂಬಂಧ ಬಗ್ಗೆಯೂ ಕೂಡ ಫೋಟೊ ಸಹಿತ
ಬೆಳಕು ಚೆಲ್ಲಿದ್ದೆವು. ಎಸ್‍ಐಟಿ ಚಾರ್ಜ್‍ಶೀಟಿನಲ್ಲಿ ನಾಗೇಂದ್ರ ಬಸನಗೌಡ ದದ್ದಲ್ ಹೆಸರೇ ಇಲ್ಲ ಎಂದು
ಆಕ್ಷೇಪಿಸಿದರು.
ಮೊದಲ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರಕಾರ ಆರೋಪಮುಕ್ತವಾಗಲು ಎಸ್‍ಐಟಿಯನ್ನು
ಮತ್ತು ಕ್ಲೀನ್ ಚಿಟ್ ಪಡೆಯಲು ಎಸಿಬಿಯನ್ನು ಬಳಸಿಕೊಂಡಿತ್ತು. ಅದೇ ಥರ ಬಳಸಿಕೊಂಡದ್ದು ವ್ಯಕ್ತವಾಗುತ್ತಿದೆ.
ಇ.ಡಿ. ಚಾರ್ಜ್‍ಶೀಟಿನಲ್ಲಿ ಹಣದ ಬಳಕೆ,ಮಾಸ್ಟರ್‍ಮೈಂಡ್ ಯಾರೆಂಬ ಕುರಿತು ಉಲ್ಲೇಖಿಸಿದ್ದಾರೆ. ನಾಗೇಂದ್ರ, ಸತ್ಯನಾರಾಯಣವರ್ಮ ಎಲ್ಲರೂ ಸೇರಿ ಸಂಚು ನಡೆಸಿದ್ದಾಗಿ ಹೇಳಿದ್ದಾರೆ ಎಂದರು. ಇದರ ನೈತಿಕ ಹೊಣೆಯನ್ನು ಮುಖ್ಯಮಂತ್ರಿಗಳೇ ಹೊರಬೇಕೆಂದು ತಿಳಿಸಿದರು.

   

Related Articles

error: Content is protected !!