ಬೆಂಗಳೂರು: ತಮಗೆ ‘ಷರಿಯಾ’ ಕಾನೂನೇ ಮುಖ್ಯ ಎನ್ನುವವರು ಪಾಕಿಸ್ತಾನಕ್ಕೆ ಹೋಗಬಹುದು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ. ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ವಕ್ಸ್ ಆಸ್ತಿ ಹೆಸರಲ್ಲಿ ರೈತರಿಗೆ ನೋಟಿಸ್ ನೀಡುವುದನ್ನು ಸರ್ಕಾರ ತಕ್ಷಣ ನಿಲ್ಲಿಸಬೇಕು. ಸಚಿವ ಜಮೀರ್ ಅಹ್ಮದ್ ಜಿಲ್ಲಾ ಪ್ರವಾಸ ಕೈಗೊಂಡು ಅಧಿಕಾರಿಗಳಿಗೆ ಬೆದರಿಕೆ ಹಾಕಿ, ನೋಟಿಸ್ ನೀಡಬೇಕು ಎಂಬುದಾಗಿ ಮೌಖಿಕ ಸೂಚನೆ ಕೊಟ್ಟಿರುವುದರಿಂದ ಇದೆಲ್ಲವೂ ಶುರುವಾಗಿದೆ ಎಂದು ಕಿಡಿಕಾರಿದರು. ದಾನ ಕೊಟ್ಟಿದ್ದೇ ನಿಜವಾಗಿದ್ದರೆ ಸೂಕ್ತ ದಾಖಲೆ ಇರಬೇಕು. ಆಗ ಮಾತ್ರ ಅದು ವಕ್ಸ್ ನಕ್ಸ್ ಆಸ್ತಿಯಾಗುತ್ತದೆ ವಕ್ಸ್ ಮಂಡಳಿ ಖರೀದಿಸಿದ್ದರೆ ಅದು ವಕ್ಸ್ ಆಸ್ತಿ ಎಂಬುದಾಗಿ ಹೇಳಬಹುದು. ಆದರೆ ಸ್ವಯಂಪ್ರೇರಿತವಾಗಿ ಘೋಷಿಸಿದರೆ ವಕ್ಸ್ಆಸ್ತಿಯಾಗುವುದಿಲ್ಲ ಎಂದರು.