125
ತಿರುವನಂತಪುರಂ : ಕರ್ನಾಟಕದಲ್ಲಷ್ಟೇ ಅಲ್ಲ ನೆರೆಯ ರಾಜ್ಯ ಕೇರಳದಲ್ಲೂ ತೆಂಗಿನ ಕಾಯಿ ಬೆಲೆ ಗಗನಕ್ಕೇರಿದ್ದು, ಹೀಗಾಗಿ ರಾಜ್ಯದ ಕಲ್ಲಿಕೋಟೆಯ ಗ್ರಾಮವೊಂದರಲ್ಲಿ ಖದೀಮರು ತೆಂಗಿನ ಕಾಯಿಗಳನ್ನೇ ಕಳ್ಳತನ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಈ ಹಿಂದೆ ಇಲ್ಲಿ ತೆಂಗಿನ ಕಾಯಿ ಬೆಲೆ ಕೇಜಿಗೆ 30 ರು. ನಷ್ಟಿತ್ತು. ಆದರೆ ಏಕಾಏಕಿ 80 ರು.ಗೆ ಏರಿಕೆ ಕಂಡಿರುವು ದರಿಂದ ಖದೀಮರು ಕಳ್ಳತನದ ಹಾದಿ ಹಿಡಿದಿದ್ದಾರೆ. ನಿರಂತರವಾಗಿ ಗ್ರಾಮದಲ್ಲಿ ತೆಂಗಿನ ಕಾಯಿಗಳ ಕಳ್ಳತನಕ್ಕೆ ಬೇಸತ್ತ ತೋಟಗಳ ಮಾಲೀಕರು ತಮ್ಮ ಜಾಗದಲ್ಲಿ ಸಿಸಿ ಟೀವಿ ಕೂಡ ಅಳವಡಿಸಿದ್ದಾರೆ. ಜೊತೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಕಳ್ಳತನದ ಬಗ್ಗೆ ದೂರು ದಾಖಲಿಸಿದ್ದಾರೆ.

