Home » ಸಿ ಟಿ ರವಿ ವಿರುದ್ದ ಅವಾಚ್ಯ ಪದದ ವಿಡೀಯೊ ಇದೆ
 

ಸಿ ಟಿ ರವಿ ವಿರುದ್ದ ಅವಾಚ್ಯ ಪದದ ವಿಡೀಯೊ ಇದೆ

ಸಿ ಎಂ ಸಿದ್ದರಾಮಯ್ಯ

by Kundapur Xpress
Spread the love

ಕಲಬುರಗಿ : ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳಕ‌ರ್ ಅವರಿಗೆ ಅವಾಚ್ಯ ಶಬ್ದ ಬಳಸಿದ ಕುರಿತು ವಿಡಿಯೋ, ಆಡಿಯೋ ಕ್ಲಿಪಿಂಗ್ ಸಾಕ್ಷ್ಯ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಭಾನುವಾರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ರವಿ ಅವಾಚ್ಯ ಶೆಬ್ದ ಬಳಿಸಿದ್ದು ಸತ್ಯ. ಸದನದ ಸದಸ್ಯರು ಅದಕ್ಕೆ ಸಾಕ್ಷಿ ಇದ್ದಾರೆ ಎಂದು ಸಮರ್ಥಿಸಿಕೊಂಡರು. ರವಿ ಬಳಸಿದ ಪದ ಅತ್ಯಂತ ಅನಾಗರಿಕವಾದದ್ದು. ರಾಷ್ಟ್ರೀಯ ಪದಾಧಿಕಾರಿ ಆಗಿದ್ದ ರವಿ ಬಾಯಲ್ಲಿ ಇಂಥಾ ಮಾತು ಬರುವುದು ನಾಚಿಕೆಗೇಡಿನದ್ದು. ಆ ಪದ ಬಳಸಿರುವುದನ್ನು ಇತರೆ ವಿಧಾನ ಪರಿಷತ್‌ ಸದಸ್ಯರು ಕೇಳಿಸಿಕೊಂಡಿದ್ದಾರೆ ಎಂದರು.

ಪ್ರಕರಣ ಕುರಿತಂತೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ, ನ್ಯಾಯಾಂಗ ತನಿಖೆ ಯಾಕೆ ಬೇಕು? ಎಂದು ಸಿಎಂ ಪ್ರಶ್ನಿಸಿದರು. ಇದು ಕ್ರಿಮಿನಲ್‌ ಅಪರಾಧ ಕೇಸ್, ಬಿಜೆಪಿಯವರು ತಮ್ಮತಪ್ಪುಗಳನ್ನು ಮುಚ್ಚಿಕೊಳ್ಳಲು ನ್ಯಾಯಾಂಗ ತನಿಖೆ ಕೇಳುತ್ತಿದ್ದಾರೆ ಎಂದು ಹೇಳಿದರು.

 

Related Articles

error: Content is protected !!