ದಾವಣಗೆರೆ : ದಾವಣಗೆರೆಯಲ್ಲಿ ಗುರುವಾರ ರಾತ್ರಿ ಗಣೇಶೋತ್ಸವ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ್ದ ಅನ್ಯ ಕೋಮಿನ 70 ರಿಂದ 80 ಯುವಕರ ಗುಂಪು ಬಳಿಕ, ಆನೆಕೊಂಡ ಬಡಾವಣೆ, ಮಟ್ಟಿಕಲ್ಲು ಪ್ರದೇಶದಲ್ಲಿ ಹಿಂದೂಗಳ ಮನೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಮಾರಕಾಸ್ತ್ರ, ಖಾರದಪುಡಿ ಹಿಡಿದು ಪುಂಡರು ಅಟ್ಟಹಾಸ ಮೆರೆದಿದ್ದು, ಜನರನ್ನು ಭಯಗೊಳಿಸಿದ್ದಾರೆ.
ನಗರದ ಅರಳೀಮರದ ಬಳಿ ಗುರುವಾರ ರಾತ್ರಿ ಗಣೇಶ ಮೆರವಣಿಗೆಯಲ್ಲಿ ಕಲ್ಲು ತೂರಿ ಗಲಭೆ ಸೃಷ್ಟಿಸಿದ್ದ ಮುಸ್ಲಿಮರ ಗುಂಪು ತಡರಾತ್ರಿ ಕೈಯಲ್ಲಿ ಖಾರದಪುಡಿ, ದೊಣ್ಣೆ, ಮಚ್ಚು ಹಿಡಿದು ಜನವಸತಿ ಪ್ರದೇಶಗಳಿಗೆ ನುಗ್ಗಿದೆ. ಮನೆಗಳ ಮುಂಭಾಗ ನಿಲ್ಲಿಸಿದ್ದ 2 ಕಾರು, 11ಕ್ಕೂ ಹೆಚ್ಚು ಬೈಕ್ ಹಾಗೂ ಸ್ಕೂಟರ್‌ಗಳನ್ನು ಜಖಂಗೊಳಿಸಿದೆ. ಅಲ್ಲದೆ, ಮನೆಗಳ ಬಾಗಿಲು, ಕಿಟಕಿಗಳಿಗೆ ಕಲ್ಲು ತೂರುವ ಮೂಲಕ ಮಹಿಳೆ, ಮಕ್ಕಳು, ವಯೋವೃದ್ಧರಲ್ಲಿ ಆತಂಕ ಸೃಷ್ಟಿಸಿದ್ದರಿಂದ ಜನರು ಇಡೀ ರಾತ್ರಿ ನಿದ್ದೆ ಮಾಡದೆ ಭಯಗೊ೦ ಡಿದ್ದರು.
ಡಿವೈಎಸ್ಪಿ ಹೋರಾಟ ವೈರಲ್
ಕಲ್ಲು ತೂರಾಟದ ವೇಳೆ ಗುರುವಾರ ರಾತ್ರಿ ನಗರ ಡಿವೈಎಸ್‌ಪಿ ಮಲ್ಲೇಶ ದೊಡ್ಡನಿ ಅವರು ಪ್ರಾಣದ ಹಂಗು ತೊರೆದು, ಗಲಭೆ ನಿಯಂತ್ರಿಸಲು ಮಾಡಿದ ಹರಸಾಹಸ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಲ್ಲೇಶ ಅವರು ಹೋಟೆಲ್ ವೊಂದರ ಮುಂದಿಟ್ಟಿದ್ದ ನಾಮಫಲಕವನ್ನೇ ತಮ್ಮ ರಕ್ಷಣೆಗೆ ಹಿಡಿದುಕೊಂಡು, ಕೈಯಲ್ಲಿನ ಲಾಠಿ ಬೀಸುತ್ತಾ ಕಲ್ಲು ತೂರುತ್ತಿದ್ದವರ ಕಡೆಗೆ ನುಗ್ಗಿ, ಗುಂಪು ಚದುರಿಸುವಲ್ಲಿ ಸಫಲರಾಗಿದ್ದಾರೆ.