ಮುಂಬೈ : ಬಾಂದ್ರಾದಲ್ಲಿರುವ ತಮ್ಮ ಮನೆಯಲ್ಲಿ ಚಾಕು ದಾಳಿಗೆ ಒಳಗಾಗಿದ್ದ ನಟ ಸೈಫ್ ಅಲಿ ಖಾನ್ ಅವರು ಮಂಗಳವಾರ ಲೀಲಾವತಿ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದಾರೆ.
ಚೂರಿ ದಾಳಿ ವೇಳೆ ಖಾನ್ ಅವರ ಕೈ, ಕುತ್ತಿಗೆ ಮತ್ತು ಬೆನ್ನಿಗೆ ಗಂಭೀರ ಗಾಯಗಳಾಗಿದ್ದವು. ವೈದ್ಯರು ಬೆನ್ನುಮೂಳೆಯಲ್ಲಿ ಸಿಲುಕಿದ್ದ ಚೂಪಾದ ಚಾಕುವನ್ನು ಹೊರ ತೆಗೆದಿದ್ದು, ಜನವರಿ 17 ರಂದು ತೀವ್ರ ನಿಗಾ ಘಟಕದಿಂದ (ಐಸಿಯು) ವಿಶೇಷ ಕೋಣೆಗೆ ಸ್ಥಳಾಂತರಿಸಲಾಗಿತ್ತು.
ಪ್ರಕರಣದಲ್ಲಿ ಬಂಧಿಸಲ್ಪಟ್ಟ ಬಾಂಗ್ಲಾದೇಶದ ಪ್ರಜೆ ಏಳು ತಿಂಗಳ ಹಿಂದೆ ಅಕ್ರಮವಾಗಿ ದೇಶವನ್ನು ಪ್ರವೇಶಿಸಿದ್ದಾನೆ ಮತ್ತು ಮುಂಬೈಗೆ ತೆರಳುವ ಮೊದಲು ಸಿಮ್ ಪಡೆಯಲು ಪಶ್ಚಿಮ ಬಂಗಾಳ ನಿವಾಸಿಯ ಆಧಾರ್ ಕಾರ್ಡ್ ಬಳಸಿದ್ದಾನೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.