ಮಲಪ್ಪುರಂ : ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಾಕಾನೆಯೊಂದು, ಮದವೇರಿದ ಕಾರಣ ರಸ್ತೆ ಬದಿ ನಿಂತಿದ್ದ ವ್ಯಕ್ತಿಯೊಬ್ಬನ್ನು ಗಾಳಿಯಲ್ಲಿ ಚೆಂಡಾಡಿದ ಹಾಗೂ 24 ಜನರ ಮೇಲೆ ದಾಳಿ ನಡೆಸಿದ ಘಟನೆ ಬುಧವಾರ ಕೇರಳದ ಮಲಪ್ಪುರಂನಲ್ಲಿ ನಡೆದಿದೆ. ಆನೆ ದಾಳಿಯಲ್ಲಿ ಗಾಯಗೊಂಡವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಲಪ್ಪುರಂ ಜಿಲ್ಲೆಯ ಬಿಪಿ ಅಂಗಡಿ ಮಸೀದಿ ಯಲ್ಲಿ ಪುಥಿಯಂಗಡಿ ಆಚರಣೆಗೆಂದು 5 ಆನೆಗಳನ್ನು ಕರೆತರಲಾಗಿತ್ತು. ಇದರಲ್ಲಿ ಪಕ್ಕಟ್ಟು ಶ್ರೀಕುಟ್ಟಣ್ ಎಂಬ ಆನೆ ಇದ್ದಕ್ಕಿದ್ದಂತೆ ನೆರೆದಿದ್ದವರ ಮಧ್ಯೆ ನುಗ್ಗಿ ತನ್ನ ಸೊಂಡಿಲಿ ನಿಂದ ಓರ್ವನನ್ನು ಎಳೆದಾಡಿ, ಗಾಳಿಯಲ್ಲಿ ತೂರಿಸಿ ಬಿಸಾಡಿದೆ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದೆ.