Home » ಮೃತನ ಕುಟುಂಬದವರಿಗೆ 5.ಲಕ್ಷ ರೂ. ಚೆಕ್
 

ಮೃತನ ಕುಟುಂಬದವರಿಗೆ 5.ಲಕ್ಷ ರೂ. ಚೆಕ್

by Kundapur Xpress
Spread the love

ಚಿತ್ರದುರ್ಗ: ಹತ್ಯೆಗೀಡಾಗಿರುವ ರೇಣುಕಾಸ್ವಾಮಿ ಅವರ ನಿವಾಸಕ್ಕೆ ಕರ್ನಾಟಕ ಫಿಲಂ ಚೇಂಬರ್  ಅಧ್ಯಕ್ಷರು, ಸದಸ್ಯರು ಹಾಗೂ ಚಿತ್ರರಂಗದ ಗಣ್ಯರು ಶನಿವಾರ ಆಗಮಿಸಿ ಮೃತನ ಕುಟುಂಬದವರಿಗೆ 5.ಲಕ್ಷ ರೂ. ಚೆಕ್ ನೀಡಿ ಸಾಂತ್ವನ ಹೇಳಿದರು. ಈಗ 5 ಲಕ್ಷ ರೂ. ಪರಿಹಾರ ನೀಡಿದ್ದೇವೆ, ಮುಂದೆ ರೇಣುಕಾಸ್ವಾಮಿ ಕುಟುಂಬಕ್ಕೆ ಯಾವುದಾದರೂ ಒಂದು ಶಾಶ್ವತ ಪರಿಹಾರ ಒದಗಿಸುತ್ತೇವೆ ಎಂದು ಫಿಲಂ ಚೇಂಬರ್ ಅಧ್ಯಕ್ಷ ಎನ್.ಎಂ.ಸುರೇಶ್ ಹೇಳಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಫಿಲಂ ಚೇಂಬರ್ ಅಧ್ಯಕ್ಷ ಎನ್.ಎಂ.ಸುರೇಶ್, ಚಲನ ಚಿತ್ರ ಮಂಡಳಿ ವತಿಯಿಂದ ದರ್ಶನ್ ಅವರನ್ನು ಬ್ಯಾನ್ ಮಾಡುವುದು ನಮ್ಮ ಕೈಯಲ್ಲಿ ಇಲ್ಲ. ಆದರೂ ಕಲಾವಿದರ ಸಂಘದ ಜೊತೆ ಮಾತನಾಡಿ ತಿರ್ಮಾನ ಕೈಗೊಳ್ಳುತ್ತೇವೆ. ಯಾವುದೇ ತಿರ್ಮಾನಕ್ಕೂ ಮುನ್ನ ಮುಂದಿನ ಎಲ್ಲಾ ಪರಿಣಾಮವನ್ನು ಯೋಚನೆ ಮಾಡುತ್ತೇವೆ ಎಂದರು.

   

Related Articles

error: Content is protected !!