ಬೆಂಗಳೂರು : ರಾಜ್ಯ ಸರ್ಕಾರವು ಕೊನೆಗೂ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದ್ದು, 7ನೇ ರಾಜ್ಯ ವೇತನ ಆಯೋಗದ ಶಿಫಾರಸುಗಳನ್ನು ಅಗಸ್ಟ್ 01ರಿಂದ ಅನ್ವಯವಾಗುವಂತೆ ಅನುಷ್ಠಾನ ಗೊಳಿಸಲು ಸೋಮವಾರ ಸಂಜೆ ನಡೆದ ಸಚಿವ `ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ತನ್ಮೂಲಕ ಆ.1 ರಿಂದ ಅನ್ವಯವಾಗುವಂತೆ ಸರ್ಕಾರಿ ನೌಕರರ ವೇತನ ಶೇ.27.5ರಷ್ಟು ಹೆಚ್ಚಳವಾಗಲಿದೆ. 2023ರ ಮಾರ್ಚ್‌ನಿಂದಲೇ ಅನ್ವಯವಾಗುವಂತೆ ಶೇ.17ರಷ್ಟು ಮಧ್ಯಂತರ ಪರಿಹಾರವನ್ನು ಈಗಾಗಲೇ ಕಲ್ಪಿಸಿದ್ದು, ಉಳಿದಂತೆ ಶೇ.10.5ರಷ್ಟು ಹೆಚ್ಚುವರಿ ವೇತನವನ್ನು ಆ.1ರಿಂದ ಅನ್ವಯವಾಗುವಂತೆ ನೀಡಲು ನಿರ್ಧರಿಸಲಾಗಿದೆ. ಇದರಿಂದ 12 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಹಾಗೂ ಪಿಂಚಣಿ ದಾರರಿಗೆ ಅನುಕೂಲವಾಗಲಿದೆ.