Home » ತಹಸೀಲ್ದಾ‌ರ್ ಕಚೇರಿಯಲ್ಲೇ ನೌಕರ ಆತ್ಮಹತ್ಯೆ
 

ತಹಸೀಲ್ದಾ‌ರ್ ಕಚೇರಿಯಲ್ಲೇ ನೌಕರ ಆತ್ಮಹತ್ಯೆ

by Kundapur Xpress
Spread the love

ಬೆಳಗಾವಿ : ತಹಸೀಲ್ದಾರ್ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ನೌಕರರೊಬ್ಬರು ಕಚೇರಿಯಲ್ಲಿಯೇ ನೇಣು ಬಿಗಿದುಕೊಂಡು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಲ್ಲಿನ ರಿಸಾಲ್ದಾರ್ ಗಲ್ಲಿಯಲ್ಲಿರುವ ತಹಸೀಲ್ದಾ‌ರ್ ಕಚೇರಿಯಲ್ಲೇ ರುದ್ರಣ್ಣ ಯಡವಣ್ಣವರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ನನ್ನ ಆತ್ಮಹತ್ಯೆಗೆ ತಹಸೀಲ್ದಾ‌ರ್ ಬಸವರಾಜ ನಾಗರಾಳ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಆಪ್ತ ಸಹಾಯಕ ಸೋಮು ನೀಡಿರುವ ಕಿರುಕುಳವೇ ಕಾರಣ ಎಂದು ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳಿರುವ ವಾಟ್ಸಾಪ್ ಗ್ರೂಪ್ ನಲ್ಲಿ ಬೆಳಗ್ಗೆ ಮೆಸೇಜ್ ಮಾಡಿದ್ದ ರುದ್ರಣ್ಣ ತಹಸೀಲ್ದಾ‌ರ್ ಬಸವರಾಜ, ಸಚಿವೆ ಹೆಬ್ಬಾಳ್ಳ‌ರ್ ಆಪ್ತ ಸಹಾಯಕ ಸೋಮು ಎಂಬಾತನ ಹೆಸರು ಉಲ್ಲೇಖಿಸಿದ್ದಾರೆ

   

Related Articles

error: Content is protected !!