ನವದೆಹಲಿ : ನೆರೆಯ ಚೀನಾ, ಹಾಂಕಾಂಗ್, ಜಪಾನ್ ದೇಶ ಗಳಲ್ಲಿ ಭಾರೀ ಆತಂಕ ಹುಟ್ಟಿಸಿರುವ ಎಚ್ ಎಂಪಿ ವೈರಸ್ ಇದೀಗ ಭಾರತಕ್ಕೂ ಕಾಲಿಟ್ಟಿದೆ. ಮೊದಲ 2 ಪ್ರಕರಣ ಬೆಂಗಳೂರಲ್ಲಿ ವರದಿಯಾಗಿದ್ದು ಇವೆರಡೂ ಸೇರಿ ದೇಶದಲ್ಲಿ ಸೋಮವಾರ 6 ಪ್ರಕರಣ ವರದಿಯಾಗಿವೆ.
ಅದರಲ್ಲಿ ಕರ್ನಾಟಕದ 2 ಮತ್ತು ಗುಜರಾತ್‌ನ 1 ಮಗುವಿನಲ್ಲಿ ಎಚ್‌ಎಂ ಪಿವಿ ವೈರಸ್ ಪತ್ತೆಯಾಗಿದೆ. ಎಂದು ಭಾರತೀಯ ವೈದ್ಯಕೀಯ ಸಂಶೋ ಧನಾ ಮಂಡಳಿ (ಐಸಿಎಂ ಆರ್) ಪ್ರಕಟಿಸಿದೆ.
ಇನ್ನು ಚೆನ್ನೈನಲ್ಲಿ 2 ಹಾಗೂ ಕೋಲ್ಕತಾದಲ್ಲಿ 1 ಕೇಸು ವರದಿಯಾಗಿದೆ. ಚೀನಾದಲ್ಲಿ ಎಚ್‌ಎಂಪಿವಿ ವೈರಸ್‌ನಿಂದ ಸಾವಿರಾರು ಜನರು ಆಸ್ಪತ್ರೆಗೆ ದಾಖಲಾಗಿದ್ದರೆ ಭಾರತದಲ್ಲೂ ಇಂಥ ಪ್ರಕರಣಗಳ ಮೇಲೆ ನಿಗಾ ಇಡಲು ದೇಶವ್ಯಾಪಿ ದಾಖಲಾಗುವ ವಿವಿಧ ಸೋಂಕಿನ ಪ್ರಕರಣಗಳ ಮೇಲೆ ಕಣ್ಣಾವಲು ಇಟ್ಟಿತ್ತು. ಈ ವೇಳೆ ಮಕ್ಕಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ವಿಶೇಷವೆಂದರೆ ಸೋಂಕು ದೃಢಪಟ್ಟ ಮಕ್ಕಳಾಗಲೀ ಅಥವಾ ಕುಟುಂಬ ಸದಸ್ಯರ ಪೈಕಿ ಯಾರೂ ವಿದೇಶಕ್ಕೆ ಹೋಗಿ ಬಂದ ಇತಿಹಾಸ ಹೊಂದಿಲ್ಲ