ಬೆಂಗಳೂರು : ಕೊಲೆ ಆರೋಪಿಗೆ ರಾಜಾತಿಥ್ಯ ಕೊಡಲು ಸಾಧ್ಯವಿಲ್ಲ. ನಟ ದರ್ಶನ್ ಗೆ ಯಾವುದೇ ರೀತಿಯ ಆತಿಥ್ಯ ನೀಡ ಲಾಗಿಲ್ಲ. ಎಲ್ಲಾ ಅಪರಾಧಿಗಳ ಹಾಗೇ ಅವರನ್ನೂ ನಡೆಸಿಕೊಳ್ಳಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ. ಪರ ಮೇಶ್ವರ್ ಹೇಳಿ ದ್ದಾರೆ. ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ದರ್ಶನ್ ವಾಕಿಂಗ್ ಮಾಡಲು ಪೊಲೀಸ್ ಠಾಣೆ ಸುತ್ತ ಶಾಮಿಯಾನ ಹಾಕಲಾ ಗಿದೆ ಎಂಬ ಆರೋಪಕ್ಕೆ ಶುಕ್ರವಾರ ಪ್ರತಿಕ್ರಿಯಿಸಿದ ಸಚಿವರು, ಪೊಲೀಸರಲ್ಲಿ ಈ ಬಗ್ಗೆ ವಿಚಾರಣೆ ಮಾಡಿದ್ದೇನೆ. ಆ ರೀತಿಯ ರಾಜಾತಿಥ್ಯವನ್ನು ದರ್ಶನ್ಗೆ ನೀಡಿಲ್ಲ. ಯಾರೂ ಆರೋಪಿಗಳಿಗೆ ರಾಜಾತಿಥ್ಯ ಕೊಡುವುದಿಲ್ಲ, ಕೊಡಲೂಬಾರದು ಎಂದರು.