Home » ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ಸು ಪಡೆದ ಸರಕಾರ
 

ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ಸು ಪಡೆದ ಸರಕಾರ

ತೀವ್ರ ಆಕ್ರೋಶ

by Kundapur Xpress
Spread the love

ಬೆಂಗಳೂರು : ಎಪ್ರಿಲ್‌ 16 2022 ರಂದು ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಲ್ಲಾ ಕೇಸುಗಳನ್ನು ಹಿಂಪಡೆಯಲು ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ 

2022ರ ಎಪ್ರಿಲ್‌ 16 ರಂದು ವಾಟ್ಸಪ್‌ ವಿಷಯಕ್ಕೆ ಸಂಭಧಿಸಿದಂತೆ ನೂರಾರು ಮಂದಿ ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆ ಎದುರು ಜಮಾಯಿಸಿ ಪೊಲೀಸ್‌ ಸ್ಟೇಷನ್‌ ಗೆ ಕಲ್ಲು ತೂರಾಟ ನಡೆಸಿ ಪೊಲೀಸ್‌ ಜೀಪನ್ನೇ ಸುಟ್ಟು ಹಾಕಿದ್ದರು ಇದಲ್ಲದೇ ಸಿಕ್ಕ ಸಿಕ್ಕ ಹಿಂದು ಮನೆಗಳ ಮೇಲೆ ಹಾಗೂ ದೇವಸ್ಥಾನಗಳ ಮೇಲೂ ಗಲಭೆಕೋರರು ಕಲ್ಲು ತೂರಾಟ ನಡೆಸಿದ್ದರು 

ಗಲಭೆ ನಿಯಂತ್ರಿಸುವ ಸಲುವಾಗಿ ಪೊಲೀಸರು 36ಕ್ಕೂ ಅಧಿಕ ಮಂದಿಯನ್ನು ಸಿಸಿ ಟಿವಿಯ ಪೂಟೇಜ್‌ ಮೂಲಕ ಗುರುತಿಸಿ ಬಂಧಿಸಿದೆ ಈ ಗಲಭೆ ಪ್ರಕರಣವನ್ನು ಬೆಂಗಳೂರಿನ ಎನ್‌ ಐ ಎ ಗೆ ವರ್ಗಯಿಸಲಾಗಿತ್ತು

ಗಲಭೆ ಪ್ರಕರಣವನ್ನು ವಾಪಾಸ್ಸು ಪಡೆದ ರಾಜ್ಯ ಸರಕಾರದ ಕ್ರಮಕ್ಕೆ ರಾಜ್ಯ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಮುಸ್ಲೀಮರ ತುಷ್ಟೀಕರಣ ಹಾಗೂ ಓಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಕಾಂಗ್ರೇಸ್‌ ಮತಿಹೀನವಾಗಿದೆ ಎಂದಿದೆ 

   

Related Articles

error: Content is protected !!