ಮೂಡ್ಲಕಟ್ಟೆ : ಶಾಸಕನಾಗಿ ಸಂಸದನಾಗಿ ಶಿಕ್ಷಣ ಪ್ರೇಮಿಯಾಗಿ ಐ.ಎಂ. ಜಯರಾಮ ಶೆಟ್ಟರ ಕೊಡುಗೆ ಅಪಾರವಾಗಿದೆ ಮೂಡ್ಲಕಟ್ಟೆಯಂತಹ ಗ್ರಾಮೀಣ ಪ್ರದೇಶದಲ್ಲಿ ಎಂಜಿನಿಯರಿಂಗ್ ಕಾಲೇಜು ಆರಂಭಿಸಿರುವುದು ಶ್ಲಾಘನೀಯ ಕಾರ್ಯ ಎಂದು ಕರ್ನಾಟಕ ಬ್ಯಾಂಕಿನ ಮಾಜಿ ನಿರ್ದೇಶಕ ಡಾ| ರಾಮಮೋಹನ್ ಹೇಳಿದರು.
ಗುರುವಾರ ಐಎಂಜೆ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಮಾಜಿ ಶಾಸಕ ಹಾಗೂ ಮಾಜಿ ಸಂಸದ ಮತ್ತು ಐ.ಎಂ.ಜೆ. ಸಮೂಹ ಸಂಸ್ಥೆಗಳ ಸಂಸ್ಥಾಪಕ ದಿ. ಐ.ಎಂ. ಜಯರಾಮ ಶೆಟ್ಟರ ಸಂಸ್ಮರಣಾ ದಿನಾಚರಣೆಯನ್ನು ಉದ್ಘಾಟಿಸಿದ ಅವರು, ಐಎಂಜೆ ಅವರ ಕನಸನ್ನು ಅವರ ಮಕ್ಕಳು ಮುಂದುವರಿಸಿರುವುದು ಉತ್ತಮ ಬೆಳವಣಿಗೆ ಎಂದರು. ಐಎಂಜೆ ಸಮೂಹ ಶಿಕ್ಷಣ ಸಂಸ್ಥೆಗಳ ಚೇರ್‌ಮೆನ್ ಸಿದ್ದಾರ್ಥ ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸೆನ್ ಠಾಣೆಯ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ಸೈಬರ್ ಅಪರಾಧದ ಕುರಿತು ಜಾಗೃತಿ ಮೂಡಿಸಿದರು
ಇದೇ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಹಾಗೂ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಭಾಸ್ಕರ್ ಕಾಮತ್ ರವರನ್ನು ಸನ್ಮಾನಿಸಲಾಯಿತು
ಎಂಎನ್‌ಬಿಎಸ್ ಟ್ರಸ್ಟಿ ರಾಮ್ ರತನ್ ಜೆ. ಶೆಟ್ಟಿ ಸಂಸ್ಥೆಯ ಬ್ಯಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ| ರಾಮಕೃಷ್ಣ ಹೆಗ್ಡೆ ಎಂಐಟಿ ಉಪಪ್ರಾಂಶುಪಾಲ ಡಾ| ಮೆಲ್ವಿನ್ ಡಿಸೋಜಾ, ಸಂಶೋಧನಾ ಕೇಂದ್ರದ ಡಾ। ಸತ್ಯಜಿತ್ ಕೆ.ಟಿ., ಮತ್ತಿತರರು ಉಪಸ್ಥಿತರಿದ್ದರು. ಐಎಂಜೆ ಪದವಿ ಕಾಲೇಜು ಪ್ರಾಂಶುಪಾಲೆ ಡಾ। ಪ್ರತಿಭಾ ಎಂ. ಪಟೇಲ್ ಸ್ವಾಗತಿಸಿ, ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಜೆನಿಫರ್ ಫ್ರೀಡಾ ಮೆನೆಜಸ್ ವಂದಿಸಿದರು. ಪ್ರಾಧ್ಯಾಪಕಿಯರಾದ ಅರ್ಚನಾ ರೂಪಶ್ರೀ, ಸ್ವರ್ಣರಾಣಿ ಪರಿಚಯಿ ಸಿದರು. ರಕ್ಷಿತಾ ಅಡಿಗ ಕಾರ್ಯಕ್ರಮ ನಿರೂಪಿಸಿದರು.

