ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯ ಅಧಿಕಾರಿ,ಸಿಬ್ಬಂದಿ ಕರ್ತವ್ಯ ನಿರ್ವಹಣೆ ವೇಳೆ ಆಕಸ್ಮಿಕ/ಅಪಘಾತಗಳಲ್ಲಿ ಮೃತಪಟ್ಟಲ್ಲಿ ಮೃತರ ಕುಟುಂಬಕ್ಕೆ ನೀಡಲಾಗುವ ಗುಂಪು ವಿಮೆ ಮೊತ್ತವನ್ನು 20 ಲಕ್ಷ ರು.ನಿಂದ 50 ಲಕ್ಷ ರು.ಗಳಿಗೆ ಹೆಚ್ಚಳ ಮಾಡಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಆದೇಶಿಸಿದ್ದಾರೆ.
ಇಲಾಖೆಯ ಫಾಲೋವರ್, ಪೇದೆ, ಮುಖ್ಯಪೇದೆ, ಸಹಾಯಕ ಪೊಲೀಸ್ ಸಬ್ ಇನ್ ಪೆಕ್ಟರ್, , ಪೊಲೀಸ್ ಇನ್ಸ್‌ಪೆಕ್ಟರ್, ಪೊಲೀಸ್ ಉಪಾಧೀಕ್ಷರು, ಪೊಲೀಸ್ ಅಧೀಕ್ಷಕರು, ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್, ಇನ್ ಪೆಕ್ಟರ್ ಜನರಲ್ ಆಫ್ ಪೊಲೀಸ್, ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್, ಡೈರೆಕ್ಟರ್ ಜನರಲ್ ಆಫ್ ಪೊಲೀಸ್, ಡೈರೆಕ್ಟರ್ ಜನರಲ್ ಆ್ಯಂಡ್ ಇನ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ಹುದ್ದೆಯವರೆಗೆ ಅಧಿಕಾರಿಗಳು, ಸಿಬ್ಬಂದಿ ಆಕಸ್ಮಿಕ/ ಅಪಘಾತದಲ್ಲಿ ಮೃತ ಪಟ್ಟರೆ ಕುಟುಂಬಕ್ಕೆ ನೀಡಲಾಗುತ್ತಿರುವ ಗುಂಪು ವಿಮಾ ಮೊತ್ತ 50 ಲಕ್ಷಕ್ಕೆ ಹೆಚ್ಚಿಸಲಾಗಿದೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ತಿಳಿಸಿದ್ದಾರೆ