81
ಬೆಂಗಳೂರು : ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಸಿನಿಮಾ ನಿರ್ಮಿಸಲು ಅನುಕೂಲವಾಗುವಂತೆ ಮೈಸೂರು ಸಮೀಪ 150 ಎಕರೆ ಜಾಗದಲ್ಲಿ ವಿಶ್ವದರ್ಜೆಯ ಹೈಟೆಕ್ ಫಿಲ್ಡ್ ಸಿಟಿ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಶನಿವಾರ ವಿಧಾನಸೌಧ ಮೆಟ್ಟಿಲುಗಳ ಮೇಲೆ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ ಉದ್ಘಾಟಿಸಿ ಮಾತನಾಡಿ, ಕೆಐಎಡಿಬಿಯಿಂದ ವಾರ್ತಾ ಇಲಾಖೆಗೆ ಜಮೀನು ಹಸ್ತಾಂತರ ಮಾಡಲಾಗಿದೆ. ವಿಶ್ವದರ್ಜೆಯ ಎಲ್ಲ ಸೌಲಭ್ಯಗಳು, ತಂತ್ರಜ್ಞಾನ ಸೌಲಭ್ಯ ಇರುವ ಫಿಲ್ಕ್ ಸಿಟಿ ನಿರ್ಮಿಸುತ್ತೇವೆ. ಸಿನಿಮಾ ರಂಗದ ಜೊತೆ ನಮ್ಮ ಸರ್ಕಾರ ಎಂದಿಗೂ ಇರುತ್ತದೆ. ಚಿತ್ರರಂಗ ಕೂಡ ನಮ್ಮ ಸಮಾಜ, ಬದುಕಿನ ವಿಚಾರಗಳನ್ನು ಪ್ರತಿಬಂಬಿಸುವ, ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರುವ ಸಿನಿಮಾಗಳನ್ನು ನಿರ್ಮಿಸಬೇಕು ಎಂದರು

