ಬೆಂಗಳೂರು : ಯಾವತ್ತೂ ದ್ವೇಷ ಕಟ್ಟಿಕೊಂಡು ಹೋಗಬಾರದು. ಪ್ರೀತಿ ಉಳಿಸಿ ಹೋಗಬೇಕು. ಆದರೆ ಗುರುಪ್ರಸಾದ್ ವಿಚಾರದಲ್ಲಿ ಇದು ಸಾಧ್ಯವಾಗದ್ದಕ್ಕೆ ಬೇಸರವಿದೆ. ಅವನ ಕುಡಿತದ ಚಟವೇ ಅವನನ್ನು ಬಲಿ ತೆಗೆದುಕೊಂಡಿದೆ ಎಂದು ನಟ ಜಗ್ಗೇಶ್ ಗುರುಪ್ರಸಾದ್ ಸಾವಿನ ಬಗ್ಗೆ ಪ್ರತಿಕ್ರಿಯಿಸಿದರು
ಆರಂಭದಲ್ಲಿ ಈತ ಬಹಳ ಆಶಾವಾದಿ, ಶಿಸ್ತಿನ ವ್ಯಕ್ತಿ. ಅಚ್ಚಗನ್ನಡದಲ್ಲಿ ಹೊಳಹು ತುಂಬಿದ ಆತನ ಮಾತುಗಳು ಅದ್ಭುತವಾಗಿರುತ್ತಿದ್ದವು. ಆದರೆ ಮುಂದೆ ಚಿತ್ರರಂಗದ ಕೆಲವರ ಸಹವಾಸದಿಂದ ಆತನ ಬದುಕು, ದಾಂಪತ್ಯ ಎಲ್ಲವೂ ಹಾಳಾಯ್ತು. ನಾನು ನೋಡಿದ ಗುರುಪ್ರಸಾದ್ ಮೊದ ಮೊದಲು ಬರುತ್ತಿದ್ದಾಗ ಕೈಯಲ್ಲಿ ನಾಲ್ಕು ಪುಸ್ತಕ ಹಿಡ್ಕೊಂಡು ಬರುತ್ತಿದ್ದರು. ಆಮೇಲಾಮೇಲೆ ಪುಸ್ತಕದ ಜಾಗದಲ್ಲಿ ಬಾಟಲಿಗಳಿರುತ್ತಿದ್ದವು.
ನನಗೆ ರಾತ್ರಿ ಒಂದೂವರೆಗೆ ಫೋನ್ ಮಾಡುತ್ತಿದ್ದ. ಎತ್ತಿದರೆ, ‘ಸತ್ತೋಗೋ, ನೀನು ಹಾಳಾಗಿ ಹೋಗೇಕು. ನೀನೂ ಒಬ್ಬ ಹೀರೋನೇನೋ ಅಂತೆಲ್ಲ ವಾಚಾಮಗೋಚರವಾಗಿ ಬೈಯ್ಯುತ್ತಿದ್ದ. ಬೆಳಗಾಗುತ್ತಲೇ ಮನೆಗೆ ಬಂದು ಕಾಲಿಗೆ ಬೀಳ್ತಿದ್ದ ಆಮೇಲೆ ಎರಡನೇ ಮದುವೆ ಮಾಡಿಕೊಂಡ. ಮಗಳು ಹುಟ್ಟಿದಳುಪಾಪ ಅವರೂ ಈತನಿಂದ ಒದ್ದಾಡುವ ಹಾಗಾಯ್ತು ಆತನ ಕೊನೆಯ ಸಿನಿಮಾ ನಿರ್ಮಾಣ ಮಾಡಿದ ಹುಡುಗ ನಮ್ಮ ಮನೆಯಲ್ಲೇ ಬೆಳೆದವನು. ಗುರು ಮಧ್ಯಾಹ್ನ 2.00 ಗಂಟೆಗೆ ನನ್ನನ್ನು ಸಿನಿಮಾ ಸೆಟ್‌ಗೆ ಕರೆಸ್ತಿದ್ದ ಆತ ಬರುವಾಗ 4.00 ಗಂಟೆ ಆಗ್ತಿತ್ತು. ಆಗಲೂ ಮದ್ಯದ ಅಮಲಿನಲ್ಲಿರುತ್ತಿದ್ದ ‘ಯಾಕೆ ಗುರು ಹೀಗೆ ಮಾಡ್ತೀ.. ಆ ನಿರ್ಮಾಪಕ ನಿನಗೆ 90 ಲಕ್ಷ ಕೊಟ್ಟಿದ್ದ ನಿನ್ನ ಲೈಫ್ ಸೆಟಲ್ ಆಗ್ತಿತ್ತು’ ಅಂದರೆ ಕೇಳೋದಕ್ಕೆ ಸಿದ್ಧ ಇರಲಿಲ್ಲ
ಗುರುಪ್ರಸಾದ್ ಸಾವು ಪ್ರತಿಯೊಬ್ಬರಿಗೂ ಪಾಠ ದುಶ್ಚಟ, ಇಗೋ, ಜಗಳಗಂಟತನ ಒಬ್ಬ ಮನುಷ್ಯನನ್ನು ಹೇಗೆ ಅಧಃಪತನಕ್ಕೆ ತಳ್ಳುತ್ತದೆ ಎಂದು ಇದರಿಂದ ತಿಳಿಯುತ್ತದೆ.