127
ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವ್ಯಾಚ ಶಬ್ದದಿಂದ ನಿಂದಿಸಿದ ಇಲ್ಲಿನ ಕೇಂದ್ರ ಕಾರಾಗೃಹ ವಾರ್ಡನ್ ಎಚ್.ಎನ್.ಮಧುಕುಮಾರ್ ಎಂಬುವರನ್ನು ಅಮಾನತು ಮಾಡಿ ಬಂಧಿಸಲಾಗಿದೆ.
ಆರೋಪಿ ಮಧು ಕುಮಾರ್ ಕುಡಿದ ಮತ್ತಿನಲ್ಲಿ ಬೆಳಗುವಿ ಸಮಾವೇಶದ ವೇಳೆ ಸಿಎಂ ಸಿದ್ದರಾಮಯ್ಯ ಅವರು ಎಎಸ್ಪಿಯನ್ನು ನಿಂದಿಸಿ ಕೈ ಎತ್ತಿದನ್ನು ಖಂಡಿಸಿ ವಿಡಿಯೋ ಮಾಡಿದ್ದನು. 5.33 ನಿಮಿಷಗಳ ವಿಡಿಯೋ ಮಾಡಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅವಾಚ್ಯ ಶಬ್ದದಿಂದ ನಿಂದಿಸಿದ್ದನು. ಅಲ್ಲದೆ, ಇದನ್ನು ಜಾಲತಾಣದಲ್ಲಿ ಹಾಕಿದ್ದನು. ಜಾಲತಾಣದಲ್ಲಿಇದು ಹರಿದಾಡಿ ಮುಜುಗರ ಉಂಟು ಮಾಡಿತ್ತು. ಈ ವಿಡಿಯೋ ಪ್ರಸಾರದ ಬಳಿಕ ಮಧುಕರ್ ನನ್ನು ಇಲಾಖೆ ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಲಾಗಿತ್ತು. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಧುಕುಮಾರ್ ನನ್ನು ಬಂಧಿಸಿದ್ದಾರೆ

