Home » ಹಾಸನದಲ್ಲಿ ಭರ್ಜರಿ ಶಕ್ತಿ ಪ್ರದರ್ಶನ
 

ಹಾಸನದಲ್ಲಿ ಭರ್ಜರಿ ಶಕ್ತಿ ಪ್ರದರ್ಶನ

ಜನ ಕಲ್ಯಾಣೋತ್ಸವ

by Kundapur Xpress
Spread the love

 ಹಾಸನ : ಉಪ ಚುನಾವಣೆ ಭರ್ಜರಿ ಗೆಲುವಿನ ನೆಪದಲ್ಲಿ ಗುರುವಾರ ಹಾಸನದಲ್ಲಿ ನಡೆದ ಜನ ಕಲ್ಯಾ ಣೋತ್ಸವ ವಿಧಾನಸಭಾ ಚುನಾವಣೆಗೂ ಮುನ್ನ ನಡೆದಿದ್ದ ದಾವಣಗೆರೆ ಸಿದ್ದರಾಮೋತ್ಸವದ ಶಕ್ತಿ ಪ್ರದರ್ಶನದ ನೆನಪು ಮಾರ್ದನಿಸು ವಂತೆ ಮಾಡಿತು ತನ್ಮೂಲಕ ಮುಡಾ, ಮುಖ್ಯಮಂತ್ರಿ ಬದಲಾವಣೆ ಚರ್ಚೆಯಂಥ ವಿಚಾರಗಳು, ಜನಮಾನಸದಲ್ಲಿರುವ ಸಿದ್ದರಾಮಯ್ಯ ಪ್ರಭಾವಳಿ ಕುಂದಿಸಿಲ್ಲ ಎಂಬ ಸಂದೇಶ ರವಾನಿಸುವ ಸಿದ್ದು ಪಾಳೆಯದ ಪ್ರಯತ್ನ ಸಂಪೂರ್ಣ ಯಶಸ್ವಿಯಾಯಿತು

ಸ್ವಾಭಿಮಾನಿ ಸಮಾವೇಶದ ಹೆಸರಲ್ಲಿ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ ಸಮಾವೇಶ ಆಗಬೇಕೋ? ಅಥವಾ ಪಕ್ಷದ ಸಮಾವೇಶ ಆಗಬೇಕೋ? ಎಂಬ ಬಗ್ಗೆ ವಿವಾದ ಉಂಟಾಗಿತ್ತು. ಅಂತಿಮವಾಗಿ ಪಕ್ಷದ ಬಾವುಟದ ಅಡಿಯಲ್ಲೇ ಸಮಾವೇಶ ನಡೆಯಿತಾದರೂ ಸಿದ್ದರಾಮಯ್ಯ ಕಂಡಾಗ, ಮಾತಿಗೆ ಇಳಿದಾಗ, ಹೆಸರು ಪ್ರಸ್ತಾಪವಾದಾಗ ಮೊಳಗಿದ ಕಾರ್ಯಕರ್ತರ ಹರ್ಷೋ ದ್ವಾರದಿಂದಾಗಿ ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನದ ಉದ್ದೇಶ ಸಾಕಾರಗೊಂಡಿತ್ತು.

ಈ ಮೂಲಕ ತಮ್ಮನ್ನು ತುಳಿಯಲು ಅಣಿಯಾಗಿರುವ ಆಂತರಿಕ ಹಾಗೂ ಬಾಹ್ಯ ರಾಜಕೀಯ ಶಕ್ತಿಗಳಿಗೆ ಸ್ವಾಭಿಮಾನಿ ಒಕ್ಕೂಟದ ಬೆಂಬಲದೊಂದಿಗೆ ಸ್ಪಷ್ಟ ಸಂದೇಶವನ್ನು ಸಿದ್ದರಾಮಯ್ಯ ರವಾನಿಸಿದರು.

 

Related Articles

error: Content is protected !!