Home » ಹಿಂದುತ್ವ ವಿಷಯದಲ್ಲಿ ಡಿಕೆಶಿ ಮಾದರಿ, ಸಿದ್ದುಗೂ ಈ ಬುದ್ದಿ ಬರಲಿ
 

ಹಿಂದುತ್ವ ವಿಷಯದಲ್ಲಿ ಡಿಕೆಶಿ ಮಾದರಿ, ಸಿದ್ದುಗೂ ಈ ಬುದ್ದಿ ಬರಲಿ

: ಈಶ್ವರಪ್ಪ

by Kundapur Xpress
Spread the love

ಹುಬ್ಬಳ್ಳಿ : ಡಿಸಿಎಂ ಡಿ.ಕೆ. ಶಿವಕುಮಾರ್ ಹಿಂದುತ್ವದ ಪರ ನಿಲುವು ಪ್ರಕಟಿಸುವುದರೊಂದಿಗೆ ಇತರರಿಗೆ ಮಾದರಿಯಾಗಿದ್ದಾರೆ. ಸಿಎಂ ಸಿದ್ದರಾಮಯ್ಯಗೂ ಈ ಬುದ್ದಿ ಬರಲಿ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಶನಿವಾರ ಸುದ್ದಿಗಾರ ರೊಂದಿಗೆ ಮಾತನಾಡಿ, ಡಿಕೆಶಿ ಹಿಂದುತ್ತ ನಿಲುವು ನಾಟಕವೋ, ನಿಜವೋ ಎಂಬುದನ್ನು ದೇವರೇ ತೀರ್ಮಾನ ಮಾಡುತ್ತಾನೆ ಎಂದರು. ಕಾಂಗ್ರೆಸಿಗರು ಸ್ವಾತಂತ್ರ್ಯ ಹೋರಾಟ ಮಾಡಿದ್ದೇ ಹಿಂದುತ್ವ ಮತ್ತೆ ವೈಭವೀಕರಿಸುವ ಉದ್ದೇಶದಿಂದ. ಹಳೇ ಕಾಂಗ್ರೆಸ್ಸಿಗರ ರಕ್ತದಲ್ಲಿ ಈಗಲೂ ಹಿಂದುತ್ವ ಇದೆ. ಕೆಲವರು ಮತ ಬ್ಯಾಂಕ್‌ಗಾಗಿ ಮುಸ್ಲಿಮರನ್ನು ಓಲೈಸುತ್ತಾರೆ ಎಂದು ಆರೋಪಿಸಿದರು. ಶಿವಕುಮಾರ್‌ಗೆ ಹಿಂದುತ್ವದ ಬಗ್ಗೆ ಜಾಗೃತಿ ಉಂಟಾಗಿ ಕುಂಭಮೇಳದಲ್ಲಿ ಭಾಗವಹಿಸಿದ್ದರು ಮಹಾತ್ಮ ಗಾಂಧೀಜಿ ಸಹ ಹಿಂದುತ್ವ ಪ್ರತಿಪಾದಿಸಿದ್ದರು ಎಂದರು.

 

Related Articles

error: Content is protected !!