Home » ಕೆಪಿಸಿಸಿ ಕಚೇರಿಗೆ ಸಿದ್ದರಾಮಯ್ಯ ಭೇಟಿ
 

ಕೆಪಿಸಿಸಿ ಕಚೇರಿಗೆ ಸಿದ್ದರಾಮಯ್ಯ ಭೇಟಿ

by Kundapur Xpress
Spread the love

ಬೆಂಗಳೂರು :  ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಕೆಪಿಸಿಸಿ ಕಚೇರಿಯಲ್ಲಿ ‘ಕಾರ್ಯಕರ್ತರೊಂದಿಗೆ ನಿಮ್ಮ ಮುಖ್ಯಮಂತ್ರಿ’ ಎಂಬ ಅಹವಾಲು ಸ್ವೀಕಾರ ಕಾರ್ಯಕ್ರಮದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್‌ ಕಾರ್ಯಕರ್ತರ ಅಹವಾಲು ಆಲಿಸಿದ್ದಾರೆ.

ನೂರಾರು ಮಂದಿಯಿಂದ ಮನವಿ ಸ್ವೀಕರಿಸಿದ ಅವರು ಕೆಲವರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದ್ದು, ಉಳಿದವುಗಳನ್ನು ವಿಭಾಗವಾರು ವಿಂಗಡಿಸಿ ಮರು ಮಂಡನೆ ಮಾಡಬೇಕು. ತ್ವರಿತಗತಿ ಯಲ್ಲಿ ಇತ್ಯರ್ಥ ಮಾಡಿ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪಹಣಿಗೆ ಸಂಬಂಧಿಸಿದ ಸಮಸ್ಯೆ*ಪರಿಹಾರಕ್ಕಾಗಿ ಹಾಸನ ಜಿಲ್ಲಾಧಿಕಾರಿಗೆ, ಬೀದಿ ಬದಿ ವ್ಯಾಪಾರಿಗಳ ಸಮಸ್ಯೆಗೆ ಹುಬ್ಬಳ್ಳಿ-ಧಾರವಾಡ ಪಾಲಿಕೆ ಆಯುಕ್ತರಿಗೆ ಹೀಗೆ ಹಲವು ಅಧಿಕಾರಿಗಳಿಗೆ ಖುದ್ದು ದೂರವಾಣಿ ಮೂಲಕ ಸೂಚಿಸಿದರು.

   

Related Articles

error: Content is protected !!