ಬಸವನಬಾಗೇವಾಡಿ : ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸು ಕೆಚ್ಚಲು ಕತ್ತರಿಸಿದರು. ಗೋಮಾತೆಗೆ ಆಗಿರುವ ಅನ್ಯಾಯವನ್ನು ನೋಡಿ ಸುಮ್ಮನೆ ಕುಳಿತುಕೊಂಡರೆ ನಾವು ಇದ್ದೂ ಸತ್ತಂತೆ ಗೋವನ್ನು ಕಡಿದರೆ ನಾವು ಅವರ ಕೈಯನ್ನೇ ಕಡಿಯುವಂತಾಗಬೇಕು. ಈ ನಿಟ್ಟಿನಲ್ಲಿ ಹಿಂದೂಗಳೆಲ್ಲ ಜಾಗೃತರಾಗಬೇಕಿದೆ. ಗೋರಕ್ಷಣೆ ಮಾಡುವ ಜೊತೆಗೆ ಹಿಂದು ಯುವತಿಯರ ಮೇಲಿನ ಅತ್ಯಾಚಾರ ತಡೆಗಟ್ಟಬೇಕಿದೆ ಎಂದು ಕ್ರಾಂತಿವೀರ ಬ್ರಿಗೇಡ್ನ ಸಂಸ್ಥಾಪಕ ಹಾಗೂ ಮಾಜಿ ಡಿಸಿಎಂ.ಕೆ.ಎಸ್.ಈಶ್ವರಪ್ಪ ಹೇಳಿದರು.
ವಿಜಯಪುರಜಿಲ್ಲೆ ಬಸವನಬಾಗೇವಾಡಿಯ ಗುರುಕೃಪಾ ವಿದ್ಯಾಸಂಸ್ಥೆಯ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕ್ರಾಂತಿವೀರ ಬ್ರಿಗೇಡ್ ಕರ್ನಾಟಕ ಸಂಘಟನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶ, ಹಿಂದು ಧರ್ಮ ಸಂರಕ್ಷಣೆ, ಗೋಮಾತೆ ಸಂರಕ್ಷಣೆ ಸಂಕಲ್ಪದೊಂದಿಗೆ ನಾವು ಈ ಬ್ರಿಗೇಡ್ ಆರಂಭಿಸಿದ್ದೇವೆ. ಸಾಧು-ಸಂತರ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ನಮ್ಮ ಬ್ರಿಗೇಡ್ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದರು.
ಕಣ್ಣೀರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಹಿಂದುಗಳ ಸಂಖ್ಯೆ ಶೇ.50ಕ್ಕಿಂತ ಕಡಿಮೆಯಾದರೆ ದೇಶದಲ್ಲಿ ಸಂವಿಧಾನ, ಪ್ರಜಾತಂತ್ರ ವ್ಯವಸ್ಥೆ ಉಳಿಯಲು ಸಾಧ್ಯವಿಲ್ಲ. ಶೇ.51ರಷ್ಟು ಮುಸ್ಲಿಂ ಧರ್ಮದವರೇ ಆದರೆ ಖಂಡಿತ ಹಿಂದುಗಳು ಬದುಕಲು ಸಾಧ್ಯವಿಲ್ಲ. ಈಗಾಗಲೇ ದೇಶದ 350 ಜಿಲ್ಲೆ ಗಳಲ್ಲಿ ಹಿಂದುಗಳು ಅಲ್ಪಸಂಖ್ಯಾತರಾಗಿದ್ದಾರೆ ಎಂದು ಎಚ್ಚರಿಸಿದರು
![](https://kundapurxpress.com/wp-content/uploads/2025/02/WhatsApp-Image-2025-02-05-at-12.29.39-PM.jpeg)
![](https://kundapurxpress.com/wp-content/uploads/2024/11/IMG-20241128-WA0000.jpg)