ಪ್ರಯಾಗರಾಜ್ : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬುಧವಾರ ತಮ್ಮ ಸಂಪುಟ ಸಚಿವರೊಂದಿಗೆ ಮಹಾ ಕುಂಭ ಮೇಳದ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ಥಾನ ಮಾಡಿದರು. ನೀತಿಗಳ ಬಗ್ಗೆ ಚರ್ಚಿಸಲು ಇಲ್ಲಿ ನಡೆದ ಕ್ಯಾಬಿನೆಟ್ ಸಭೆಯ ನಂತರ ಮಧ್ಯಾಹ್ನ ಪವಿತ್ರ ಸ್ಥಾನ ಮಾಡಿದರು
ಆದಿತ್ಯನಾಥ್ ಅವರೊಂದಿಗೆ ಉಪಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಮತ್ತು ಬ್ರಜೇಶ್ ಪಾಠಕ್, ಸಚಿವರಾದ ದಾನಿಶ್ ಆಜಾದ್ ಅನ್ಸಾರಿ, ಆಶಿಶ್ ಪಟೇಲ್ ಮತ್ತು ಬಲದೇವ್ ಸಿಂಗ್ ಔಲಾಖ್, ಸಂಜಯ್ ನಿಷಾದ್ ಮತ್ತಿತರರು ಉಪಸ್ಥಿತರಿದ್ದರು. ಅಯೋಧ್ಯೆಯ ರಾಮ ದೇವಾಲಯದಲ್ಲಿ ರಾಮಲಲಾ ವಿಗ್ರಹದ ಪ್ರತಿಷ್ಠಾಪನಾ ಸಮಾರಂಭದ ಮೊದಲ ವಾರ್ಷಿಕೋತ್ಸವವನ್ನು ಸೂಚಿಸುವ ದಿನದಂದು ಕ್ಯಾಬಿನೆಟ್ ಸಭೆ ಮತ್ತು ಪವಿತ್ರ ಸ್ನಾನ ನಡೆದಿರುವುದು ವಿಶೇಷ.
ಇದಕ್ಕೂ ಮುನ್ನ ಯುಪಿ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಅವರು ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಸಂಗಮದಲ್ಲಿ ಸ್ನಾನ ಮಾಡಿದರು.