ಗರಿಯಾಬಂದ್ : ಛತ್ತೀಸ್‌ಗಢದ ಗರಿಯಾಬಂದ್ ಜಿಲ್ಲೆಯ ಅರಣ್ಯದಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವಿನ ಕಾದಾಟದಲ್ಲಿ ಸೋಮವಾರ ಇಬ್ಬರು ಮಹಿಳಾ ನಕ್ಸಲೀಯರು ಸಾವನ್ನಪ್ಪಿದ್ದಾರೆ ಮತ್ತು ಸಿಆರ್‌ಪಿಎಫ್‌ನ ಹಿರಿಯ ಕಮಾಂಡೋ ಬೆಟಾಲಿಯನ್ ಫಾರ್‌ರೆಸಲ್ಯೂಟ್ ಆಕ್ಷನ್ (ಕೋಬ್ರಾ)ನ ಒಬ್ಬ ಸಿಬ್ಬಂದಿ ಗಾಯಗೊಂಡಿದ್ದಾರೆ. ಇದರಿಂದಾಗಿ ಛತ್ತೀಸಗಢದಲ್ಲಿ ಈ ವರ್ಷ 28 ನಕ್ಸಲರು ಹತರಾದಂತಾಗಿದೆ. ಈ ಪೈಕಿ ಜನವರಿ 16ರಂದು ಬಿಜಾಪುರ ಜಿಲ್ಲೆಯಲ್ಲಿ 18 ನಕ್ಸಲೀಯರು ಹತರಾಗಿದ್ದರು. 2024ರಲ್ಲಿ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ 219 ನಕ್ಸಲೀಯರನ್ನು ಹತ್ಯೆ ಮಾಡಲಾಗಿತ್ತು,