Home » ಆಸ್ತಿ ನೋಂದಣಿಗಾಗಿ 7ನೇ ದಿನವೂ ಜನರ ಪರದಾಟ
 

ಆಸ್ತಿ ನೋಂದಣಿಗಾಗಿ 7ನೇ ದಿನವೂ ಜನರ ಪರದಾಟ

by Kundapur Xpress
Spread the love

ಬೆಂಗಳೂರು : ರಾಜ್ಯದಲ್ಲಿನ ಆಸ್ತಿ ದಸ್ತಾವೇಜು ನೋಂದಣಿ ಪ್ರಕ್ರಿಯೆ ಹಾಗೂ ಇಸಿ/ಸಿಸಿ ಸೇವೆ ನೀಡುವ ಕಾವೇರಿ 2.0 ತಂತ್ರಾಂಶದಲ್ಲಿನ ಸರ್ವರ್ ಸಮಸ್ಯೆಯಿಂದಾಗಿ ಏಳನೇ ದಿನವೂ ಸಾರ್ವಜನಿಕರು ಪರದಾಡುವಂತಾಗಿದೆ ಕಳೆದ ಒಂದು ವಾರದಿಂದ ಇದ್ದ ಸರ್ವರ್ ಸಮಸ್ಯೆ ಬುಧವಾರವೂ ಮುಂದುವರೆದಿದ್ದು, ಬೆಳಗ್ಗೆಯೂ ಕಾವೇರಿ 2.0 ತಂತ್ರಾಂಶದ ನಾಗರಿಕರ ಲಾಗಿನ್ ತೆರೆದುಕೊಳ್ಳಲಿಲ್ಲ. ಉಪ ನೋಂದಣಾಧಿಕಾರಿಗಳ ಲಾಗಿನ್ ತೆರೆದು ಕೊಂಡಿದ್ದರೂ ತಾಂತ್ರಿಕ ಸಮಸ್ಯೆ ಮುಂದುವರೆದಿದ್ದರಿಂದ ಗೊಂದಲಗಳಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ ಎಂದು ತಿಳಿದುಬಂದಿದೆ.

ಆದರೆ ಸಂಜೆ ವೇಳೆಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು, ಸಮಸ್ಯೆಗೆ ತುತ್ತಾಗಿದ್ದ ಕಾವೇರಿ 2.0 ತಂತ್ರಾಂಶವನ್ನೀಗ ಪೂರ್ಣ ಪುನಃಸ್ಥಾಪಿಸಲಾಗಿದೆ ಎಂದಿದ್ದಾರೆ

 

Related Articles

error: Content is protected !!