ಬಳ್ಳಾರಿ : ಸಿಎಂ ಹಾಗೂ ಡಿಸಿಎಂ ಬದಲಾವಣೆ ಚರ್ಚೆಯಲ್ಲಿ ನಾನಿಲ್ಲ, ನಾನು ಕಾಂಗ್ರೆಸ್ ಪಕ್ಷದ. ಶಿಸ್ತಿನ ಸಿಪಾಯಿ. ನಮ್ಮದು ಶಿಸ್ತಿನ ಪಕ್ಷ ಯಾವುದೇ ವಿಷಯಗಳಿದ್ದರೂ ಆಂತರಿಕವಾಗಿ ಚರ್ಚಿಸಿ ಬಗೆಹರಿಸುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಯರ್ ಹೇಳಿದರು.
ನಗರದಲ್ಲಿ ಶನಿವಾರ ಮಾತನಾಡಿದ ಅವರು, ಸಿಎಂ ಬದಲಾವಣೆ, ಡಿಸಿಎಂ ಹುದ್ದೆ ಸೃಷ್ಟಿ ಬಿಟ್ಟು ಬೇರೆ ಇದ್ದರೆ ಹೇಳಿ ಎಂದರು , ಇವೆಲ್ಲ ಹೈಕಮಾಂಡ್ ನಾಯಕರು ನೋಡಿ ಕೊಳ್ತಾರೆ ಎಂದರು. ಗ್ಯಾರಂಟಿಗಳಿಂದ ಸರ್ಕಾರದ ಖಜಾನೆ ಖಾಲಿಯಾಗಿದೆ. ಸುಮಾರು ತಿಂಗಳಿಂದ ಗೃಹ ಲಕ್ಷ್ಮೀ ಹಣ ಬಂದಿಲ್ಲ ಎಂದು ಬಿಜೆಪಿ ಅವರು ಸುಳ್ಳು ಆರೋಪ ಮಾಡುತ್ತಿದ್ದು, ಈಗಾಗಲೇ ಮೇ 5ರಂದು ಹಣ ಜಮಾ ಮಾಡಲಾಗಿದೆ. ಜೂನ್ ಹಾಗೂ ಜುಲೈ ಮಾತ್ರ ಹಾಕಿಲ್ಲ. ಜೂನ್ ತಿಂಗಳದ್ದು ಎರಡು ದಿನಗಳಲ್ಲಿ ಹಣ ಜಮಾ ಆಗಲಿದೆ. ಜುಲೈ ತಿಂಗಳದ್ದು, 15ರ ನಂತರ ಜಮಾ ಆಗಲಿದೆ. ಇದರಲ್ಲಿ ಅನುಮಾನ ಬೇಡ ಎಂದರು.