Home » ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು ವಿಂಶತಿ ಸಂಭ್ರಮ
 

ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು ವಿಂಶತಿ ಸಂಭ್ರಮ

by Kundapur Xpress
Spread the love

ಕುಂದಾಪುರ : ರಾಜ್ಯದ ಪ್ರತಿಷ್ಟಿತ ಇಂಜಿನಿಯರಿಂಗ್ ಕಾಲೇಜುಗಳಲ್ಲೊಂದಾದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿಗೆ ಈಗ ಇಪ್ಪತ್ತರ ಸಂಭ್ರಮ.ಮಾಜಿ ಸಂಸದ ದಿವಂಗತ ಐ ಎಮ್ ಜಯರಾಮ ಶೆಟ್ಟರ ಕನಸಿನ ಕೂಸಾಗಿ ಹುಟ್ಟಿದ ಈ ಕಾಲೇಜು ಹಲವು ಕಾರ್ಯವೈಖರಿಗಳಿಂದ ತನ್ನದೇ ಆದ ಛಾಪು ಮೂಡಿಸಿದೆ.2004ರಲ್ಲಿ ಸ್ಥಾಪಿತವಾದ ಈ ಕಾಲೇಜು ಐ. ಎಂ. ಜಯರಾಮ ಶೆಟ್ಟಿ ಅವರ ನೇತೃತ್ವದಲ್ಲಿ ಸ್ಥಾಪನೆಯಾದ ಎಂಎನ್ ಬಿಎಸ್ ಟ್ರಸ್ಟ್ ನ ಅಂಗಸಂಸ್ಥೆಯಾಗಿ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ಪಡೆಯುವ ಭರವಸೆಯ ಸಂಕೇತವಾಗಿ ರೂಪಿತವಾಗಿದೆ.. ಅಲ್ಲದೇ ಪ್ರತಿಭಾನ್ವಿತ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಯುವ ಮನಸ್ಸುಗಳಿಗೆ ಶಿಕ್ಷಣವೇತನ ಮತ್ತು ಆರ್ಥಿಕ ಸಹಾಯವನ್ನು ಒದಗಿಸಿ ಉತ್ತಮ ಉದ್ಯೋಗ ದೊರಕಿಸುವ ಬೆಳಕಿನ ಆಶಾ ಕಿರಣವಾಗಿ ಹೊರಹೊಮ್ಮಿದೆ ಎನ್ನುವುದರಲ್ಲಿ ಬೇರೆ ಮಾತಿಲ್ಲ. ಇಂಜಿನಿಯರಿಂಗ್ ಮಾತ್ರವಲ್ಲದೇ ಸ್ನಾತಕೋತ್ತರ ಪದವಿಗಳಾದ ಎಮ್ ಬಿ ಎ ಹಾಗೂ ಎಮ್ ಸಿ ಎ ಲಭ್ಯವಿದೆ‌. ಉನ್ನತ ಶಿಕ್ಷಣ ಪಡೆಯುವವರಿಗೆ, ವಿದ್ಯಾರ್ಥಿಗಳಿಗೆ ತಂತ್ರಜ್ಞಾನದಲ್ಲಿ ಹೊಸ ಹೊಸ ಸಂಶೋಧನೆಗೆ ಅನುಕೂಲವಾಗುವಂತಹ ಸಂಶೋಧನ ಕೇಂದ್ರ, ನವೀಕರಣಗೊಂಡ ಆಧುನಿಕ ಲ್ಯಾಬೋರೇಟರಿ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ. ಈ ಮೂಲಕ ವಿದ್ಯಾರ್ಥಿಗಳು ಹಲವು ಸಾಧನೆಗಳನ್ನು ಮಾಡಿರುವ ಹೆಗ್ಗಳಿಕೆ ಈ ಸಂಸ್ಥೆಯದು. ದಿ|ಜಯರಾಮ ಶೆಟ್ಟರ ಮಗನಾದ ಶ್ರೀ ಸಿದ್ಧಾರ್ಥ ಜೆ ಶೆಟ್ಟಿ ಹಾಗೂ ಅವರ ಆಡಳಿತ ವರ್ಗದ ಅವಿರತ ಪರಿಶ್ರಮ ಕಾಲೇಜಿನ ಯಶಸ್ಸನ್ನು ಉತ್ತುಂಗಕ್ಕೇರಿಸುವಲ್ಲಿ ಕಾರಣೀಭೂತವಾಗಿದೆ. ಕಾಲೇಜಿನ ಪ್ಲೇಸ್ಮೆಂಟ್ ವಿಭಾಗವು ಬಹಳ ಕ್ರಿಯಾಶೀಲವಾಗಿದ್ದು ಹಲವು ಪ್ರತಿಷ್ಟಿತ ಕಂಪೆನಿಗಳನ್ನು ಕಾಲೇಜಿನ ಕ್ಯಾಂಪಸ್ ಸಂದರ್ಶನಕ್ಕೆ ತರಿಸಿದ ಕೀರ್ತಿ ಹೊಂದಿದೆ. ಪ್ರಥಮ ವರ್ಷದಿಂದಲೇ ತರಭೇತಿಯನ್ನು ನೀಡಿ ವಿದ್ಯಾರ್ಥಿಗಳನ್ನು ಕಂಪೆನಿ ಸಂದರ್ಶನಕ್ಕೆ ತಯಾರಿ ನಡೆಸಲಾಗುತ್ತದೆ. ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಆಧ್ಯತೆ ನೀಡಿರುವುದಕ್ಕೆ ಸಾವಿಷ್ಕಾರ್ ಎನ್ನುವ ರಾಜ್ಯಮಟ್ಟದ ಟೆಕ್ನೋ ಕಲ್ಚರಲ್ ಫೆಸ್ಟ್ ಸಾಕ್ಷಿ ಆಗಿದೆ. ಇಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಈಗ ದೇಶ ವಿದೇಶದ ಕಂಪೆನಿಗಳಲ್ಲಿ ಉನ್ನತ ಸ್ಥಾನದಲ್ಲಿ ಹಾಗೂ ಹಲವಾರು ವಿದ್ಯಾರ್ಥಿಗಳು ಗವರ್ನ್ಮೆಂಟ್ ಸೆಕ್ಟರ್ ಅಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನುವುದು ಹೆಮ್ಮೆಯ ವಿಷಯ. ತಾಂತ್ರಿಕ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದಿ ಕಾಲೇಜಿನ ಕೀರ್ತಿ ಎಲ್ಲೆಡೆ ಪಸರಿಸಲಿ ಎಂಬ ಆಶಯದೊಂದಿಗೆ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರ ಆಶಯ

   

Related Articles

error: Content is protected !!