ಮೈಸೂರು : ಸರ್ಕಾರಕ್ಕೆ ಅರಮನೆ ಟಾರ್ಗೆಟ್ ಎಂಬುದರಲ್ಲಿ ಯಾವ ಆಶ್ಚರ್ಯವೂ ಇಲ್ಲ, ನಾವು ಸದಾ ಕಾಲ ಟಾರ್ಗೆಟ್ ಆಗುತ್ತಲೇ ಬಂದಿದ್ದೇವೆ ಎಂದು ಸಂಸದ ಯದುವೀರ ಒಡೆಯರ್ ಹೇಳಿದ್ದಾರೆ
ಸುದ್ದಿಗಾರರೊಂದಿಗೆ ಮಾತನಾಡಿ, ಅರಮನೆ-ಸರ್ಕಾರ ಮಧ್ಯೆ ತುಂಬಾ ವರ್ಷದಿಂದ ಕಾನೂನು ಸಂಘರ್ಷ ನಡೆಯುತ್ತಿದೆ. ನಾನು ರಾಜ ಕಾರಣಕ್ಕೆ ಬಂದ ಕಾರಣಕ್ಕೆ ಅದು ಹೆಚ್ಚಾಗಿಲ್ಲ ಸಿದ್ದರಾಮಯ್ಯ ಮೊದಲ ಬಾರಿ ಡಿಸಿಎಂ ಆದ ದಿನದಿಂದ ಈ ಹೋರಾಟ ನಡೆಯುತ್ತಲೇ ಇದೆ. ಎಲ್ಲವನ್ನೂ ಕಾನೂನಾತ್ಮಕವಾಗಿ ಎದುರಿಸುತ್ತೇವೆ ಎಂದರು.
ಸಿಎಂ ರಾಜೀನಾಮೆ ನೀಡಲಿ :
ಮುಡಾದಲ್ಲಿ ತಪ್ಪು ಆಗಿದೆ ಎಂಬುದು ಇಡಿ, ವರದಿಯಲ್ಲಿ ಗೊತ್ತಾಗಿದೆ. ಈಗಲಾದರೂ ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದರು.