ಕಲಬುರಗಿ : ಮುಡಾ ನಿವೇಶನ ಹಂಚಿಕೆಯ ಹಗರಣ ರಾಜ್ಯಕ್ಕೆ ಹಾಗೂ ಕಾಂಗ್ರೆಸ್ ಗೆ ಒಂದು ಕಪ್ಪು ಚುಕ್ಕೆ ಎಫ್‌ಐಆರ್ ದಾಖಲಾಗಿ ಲೋಕಾಯುಕ್ತ ವಿಚಾರಣೆ ನಡೆದರೂ ರಾಜೀನಾಮೆ ಕೊಡದಿರುವುದು ಸಿಎಂ ಸಿದ್ದರಾಮಯ್ಯ ಭಂಡತನಕ್ಕೆ ಹಿಡಿದ ಕನ್ನಡಿ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಟೀಕಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರ ಮೇಲೆಯೇ ಮುಡಾ ಹಗರಣದ ಆರೋಪಗಳಿವೆ. ಮುಖ್ಯಮಂತ್ರಿ ಸ್ಥಾನದಲ್ಲಿದ್ದು ಲೋಕಾಯುಕ್ತರ ಪ್ರಶ್ನೆಗಳಿಗೆ ಉತ್ತರ ನೀಡುತ್ತಿರೋದು ರಾಜ್ಯದ ಇತಿಹಾಸದಲ್ಲೇ ಮೊದಲು. ಇದು ರಾಜ್ಯಕ್ಕೆ ಮಸಿ ಬಳಿದಂತೆ. ಆರೋಪ ಕೇಳಿ ಬಂದ ತಕ್ಷಣ ರಾಜೀನಾಮೆ ಬಿಸಾಕಿ ವಿಚಾರಣೆ ಎದುರಿಸೋದು ಬಿಟ್ಟು ಸಿಎಂ ಸ್ಥಾನದಲ್ಲಿದ್ದೇ ವಿಚಾರಣೆ ಎದುರಿಸುತ್ತಿರುವುದು ಭಂಡತನಕ್ಕೆ ಕನ್ನಡಿ ಹಿಡಿದಂತಿದೆ ಎಂದರು.