ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆ ಸುತ್ತಿರುವ ಮೈಸೂರಿನ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು, ಗುರು ವಾರ ಮುಡಾ ಮಾಜಿ ಆಯುಕ್ತ ಪಿ.ಎಸ್. ಕಾಂತರಾಜು ವಿಚಾರಣೆ ನಡೆಸಿದರು.
2017ರಲ್ಲಿ ಮುಡಾ ಆಯುಕ್ತರಾಗಿದ್ದ ಪಿ.ಎಸ್. ಕಾಂತರಾಜು ಅವರಿಗೆ ವಿಚಾ ರಣೆಗೆ ಹಾಜರಾಗುವಂತೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರ ಲೋಕಾಯುಕ್ತ ಎಸ್ಪಿ ಕಚೇರಿಗೆ ಆಗಮಿಸಿದ ಕಾಂತರಾಜು ಅವರನ್ನು ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ ನೇತೃತ್ವದಲ್ಲಿ ಅಧಿಕಾರಿಗಳು ವಿಚಾರಣೆ ನಡೆಸಿದರು.
ವಿಚಾರಣೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕಾಂತರಾಜು, ನನ್ನ ಅವ ಧಿಯ ಮುಡಾ ವ್ಯವಹಾರಗಳ ಬಗ್ಗೆ ವಿಚಾರಣೆಗೆ ಕರೆದಿದರು. 2017ರಲ್ಲಿ ನಾನು ಮುಡಾ ಆಯುಕ್ತನಾಗಿದ್ದೆ. ಆಗ ‘ಸಿಎಂ ಪತ್ನಿ ಪಾರ್ವತಿ ಅವರು ಪಡೆದಿದ್ದ ಭೂಮಿಯ ಪರಿಹಾರದ ಬಗ್ಗೆ ವಿಚಾರಣೆ ನಡೆದಿದೆ. 2017ರ ಪ್ರಾಧಿಕಾರದ ಸಭೆಯಲ್ಲಿ ಅಭಿವೃದ್ಧಿ ಪಡಿಸದ ಭೂಮಿ ಕೊಡಲು ತೀರ್ಮಾನ ಮಾಡಿದ್ದೇವು. ಇದೆಲ್ಲದರ ಬಗ್ಗೆ ವಿಚಾರಣೆ ಆಗಿದೆ. ತನಿಖೆ ಪ್ರಗತಿಯಲ್ಲಿ ಇರುವುದರಿಂದ ಯಾವುದರ ಬಗ್ಗೆಯೂ ಹೆಚ್ಚು ಮಾತನಾಡಲಾರೆ. ಅಧಿಕಾರಿಯಾಗಿ ನನಗೂ ಕೆಲವು ನಿರ್ಬಂಧಗಳು ಇದೆ ಎಂದು ತಿಳಿಸಿದರು.