ಬೆಂಗಳೂರು : ಮುಡಾ ಹಗರಣ ಸಿಬಿಐಗೆ ವಹಿಸುವಂತೆ ಕೋರಿರುವ ಅರ್ಜಿ ವಿಚಾರಣೆಯನ್ನು ಜ.27ಕ್ಕೆ ಮುಂದೂಡಿರುವ ಹೈಕೋರ್ಟ್ ಈ ಸಂಬಂಧ ಲೋಕಾಯುಕ್ತ ತನಿಖೆ ಮುಂದುವರಿಯಲಿ ತನಿಖೆ ಮೇಲೆ ಲೋಕಾಯುಕ್ತ ಐಜಿಪಿ ನಿಗಾ ವಹಿಸಬೇಕು. ಮುಂದಿನ ವಿಚಾರಣೆಗೂ ಮುನ್ನ ತನಿಖಾ ವರದಿ ಸಲ್ಲಿಸಬೇಕೆಂದು ಲೋಕಾಯುಕ್ತ ಪೊಲೀಸರಿಗೆ ನಿರ್ದೇಶಿಸಿದೆ. ಮುಡಾ ಪ್ರಕರಣ ತನಿಖೆ ಸಿಬಿಐಗೆ ವಹಿಸಬೇಕೆಂದು ಕೋರಿ ದೂರುದಾರ ಸ್ನೇಹ ಮಯಿ ಕೃಷ್ಣ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಅರ್ಜಿದಾರರ ಪರ ವಕೀಲ ಮಣೀಂದರ್‌ಸಿಂಗ್ ವಾದಿಸಿ, ಹಗರಣದಲ್ಲಿ ರಾಜಕಾರಣಿಗಳು ಭಾಗಿಯಾದಾಗ ನಿಷ್ಪಕ್ಷಪಾತ ತನಿಖೆ ಕಷ್ಟ ಹೀಗಾಗಿ ಸ್ವತಂತ್ರ ತನಿಖೆ ಅಗತ್ಯವಿದೆ ಎಂದರು.