Home » ಸಿದ್ದು ಬೆನ್ನು ಬಿಡದ ಮುಡ ಭೂತ
 

ಸಿದ್ದು ಬೆನ್ನು ಬಿಡದ ಮುಡ ಭೂತ

by Kundapur Xpress
Spread the love

ಬೆಂಗಳೂರು : ಮುಡಾ ಹಗರಣದ ಸುಳಿಯಿಂದ ಬಚಾವಾಗಲು ಸಿದ್ದರಾಮಯ್ಯ ಸರ್ವ ಪ್ರಯತ್ನ ಮಾಡುತಿದ್ದರೂ, ಮುಡಾ ಹಗರಣ ಸಾಲು ಸಾಲಾಗಿ ಸಿದ್ದರಾಮಯ್ಯ ಅವರಿಗೆ ಸವಾಲು ತಂದೊಡ್ಡುತ್ತಿದೆ. ಇತ್ತೀಚೆಗೆ ಲೋಕಾಯುಕ್ತ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದ ಸಿದ್ದರಾಮಯ್ಯ ಈಗ ಇಡಿ (ಜಾರಿ ನಿರ್ದೇಶನಾಲಯ)ದ ವಿಚಾರಣೆ ಎದುರಿಸುವ ಅನಿವಾರ್ಯತೆ ಮೂಡಿದೆ.

ಮತ್ತೊಂದೆಡೆ ಮುಡಾ ಮಾಜಿ ಅಧ್ಯಕ್ಷ ಹಾಗೂ ಸಿಎಂ ಆಪ್ತ ಮರಿಗೌಡ ಮುಡಾ ಹಗರಣ ಸಂಬಂಧ ಇಡಿ ಕಚೇರಿಗೆ ಹಾಜರಾಗಿದ್ದಾರೆ. ಗುರುವಾರ ಹೈಕೋರ್ಟ್‌ನಲ್ಲಿ ಸಿದ್ದರಾಮಯ್ಯ ಮುಡಾ ಹಗರಣ ಸಂಬಂಧ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ಕೂಡ ನಡೆದಿದ್ದು ಅದರ ವಿಚಾರಣೆ ನವೆಂಬರ್ 23ಕ್ಕೆ ಮುಂದೂಡಿಕೆಯಾಗಿದೆ.

 

Related Articles

error: Content is protected !!