ಬೆಂಗಳೂರು : ಮುಡಾ ಹಗರಣದ ಬಗ್ಗೆ ದಿನಕ್ಕೊಂದು ಎಂಬಂತೆ ಸ್ಪೋಟಕ ಮಾಹಿತಿ ಹೊರಬರುತ್ತಲೇಯಿದ್ದು, ಅದರ ಮುಂದುವರಿದ ಭಾಗವಾಗಿ ಸಿಎಂ ಸಿದ್ದರಾಮಯ್ಯ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಮತ್ತೊಂದು ಪುರಾವೆಯನ್ನು ಜಾರಿ ನಿರ್ದೇಶನಾಲಯ (ಇಡಿ) ಬಹಿರಂಗಪಡಿಸಿದೆ.
ಇಡಿ ತನಿಖೆ ನಡೆಸಿದ ತಾತ್ಕಾಲಿಕ ವರದಿಯನ್ನು ಉಲ್ಲೇಖಿಸಿ ಮೈಸೂರಿನ 14 ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಪತ್ರ ಬರೆದಿದೆ. ಅದರಲ್ಲಿ, ಮುಡಾವು. ಜಮೀನನನ್ನು 3,24,700 ರೂ. ಮೊತ್ತಕ್ಕೆ ಸ್ವಾಧೀನಪಡಿಸಿಕೊಂಡಿತ್ತು. ಆದರೆ, ಆ ಬಳಿಕ ತಪ್ಪು ಮಾಹಿತಿ, ಪ್ರಭಾವ ಆಧರಿಸಿ ಕಾನೂನುಬಾಹಿರ ಡಿನೋಟಿಫಿಕೇಷನ್ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿ.ಎಂ. ಪಾರ್ವತಿ, ಬಿ.ಎಂ. ಮಲ್ಲಿಕಾರ್ಜುನಸ್ವಾಮಿ, ದೇವರಾಜು, ಮುಡಾ ಅಧಿಕಾರಿಗಳು ಸೇರಿದಂತೆ ಇತರ ಪ್ರಭಾವಿ ವ್ಯಕ್ತಿಗಳು ಈ ಕೃತ್ಯ ದಲ್ಲಿ ಭಾಗಿಗಳಾಗಿದ್ದಾರೆ ಎಂಬುದನ್ನು ಇಡಿ ವಿವರಿಸಿದೆ.