Home » ಸಿದ್ದು ತಲೆದಂಡಕ್ಕೆ ದೋಸ್ತಿ ಪಕ್ಷಗಳ ಆಗ್ರಹ
 

ಸಿದ್ದು ತಲೆದಂಡಕ್ಕೆ ದೋಸ್ತಿ ಪಕ್ಷಗಳ ಆಗ್ರಹ

by Kundapur Xpress
Spread the love

ಮೈಸೂರು : ಮುಡಾ ಹಗರಣವನ್ನು ಪ್ರಮುಖ ಅಸ್ತ್ರವನ್ನಾಗಿಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಪದತ್ಯಾಗಕ್ಕೆ ಆಗ್ರಹಿಸಿ ಎಂಟು ದಿನಗಳ ಕಾಲ ಬಿಜೆಪಿ ಮತ್ತು ಜೆಡಿಎಸ್ ನಡೆಸಿದ ‘ಮೈಸೂರು ಚಲೋ’ ಪಾದಯಾತ್ರೆಗೆ ಬೃಹತ್ ಸಮಾವೇಶದೊಂದಿಗೆ ತೆರೆ ಬಿದ್ದಿದ್ದು, ಮುಖ್ಯಮಂತ್ರಿಗಳು ರಾಜೀನಾಮೆ ನೀಡುವವ ರೆಗೆ ಹೋರಾಟದ ಕಾವು ಮುಂದುವರೆಸುವ ಪಣವನ್ನು ಎರಡೂ ಪಕ್ಷಗಳ ನಾಯಕರು ತೊಟ್ಟಿದ್ದಾರೆ.

ಶನಿವಾರ ಸಿದ್ದರಾಮಯ್ಯ ಅವರ ತವರು ಮೈಸೂರಿನಲ್ಲಿ ಬೃಹತ್ ಸಮಾವೇಶದ ಮೂಲಕ ಠೇಂಕರಿಸಿದ ಮಿತ್ರ ಪಕ್ಷಗಳ ಘಟಾನುಘಟಿ ನಾಯಕರು, ಮುಖ್ಯಮಂತ್ರಿ ರಾಜೀನಾಮೆ ನೀಡುವವರೆಗೆ ಹೋರಾಡಲು ಸಹಸ್ರಾರು ಕಾರ್ಯಕರ್ತರ ಸಮ್ಮುಖದಲ್ಲಿ ಪಣ ತೊಟ್ಟರು. . ಇದೇ ವೇಳೆ ಸಮಾವೇಶದಲ್ಲಿ ಮುಡಾ ಹಗ ರಣಕ್ಕೆ ಸಂಬಂಧಿಸಿದಂತೆ ‘5000 ನಿವೇಶನಗಳನ್ನು ನುಂಗಿದ ಆ 14 ನಿವೇಶನಗಳು’ ಎಂಬ ಪುಸ್ತಕ ವನ್ನು ಬಿಡುಗಡೆ ಮಾಡಲಾಯಿತು. ಸಮಾರಂ ಭದಲ್ಲಿ ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿ ದಂತೆ ಮಿತ್ರ ಪಕ್ಷಗಳ ಇತರೆ ನಾಯಕರು ಸರ್ಕಾರ ವಿರುದ್ಧ ಟೀಕಾಪ್ರಹಾರ ನಡೆಸಿದರು

   

Related Articles

error: Content is protected !!