Home » ಸಂಸದ ತುಕಾರಾಮ್‌ ವಜಾಕ್ಕೆ ಆಗ್ರಹ
 

ಸಂಸದ ತುಕಾರಾಮ್‌ ವಜಾಕ್ಕೆ ಆಗ್ರಹ

by Kundapur Xpress
Spread the love

ಬೆಂಗಳೂರು : ವಾಲ್ಮೀಕಿ ನಿಗಮದ 21 ಕೋಟಿ ರು. ಹಣವನ್ನು ಬಳ್ಳಾರಿ ಲೋಕಸಭಾ ಚುನಾವಣೆಗೆ ಖರ್ಚು ಮಾಡಿದ್ದಾಗಿ ಜಾರಿ ನಿರ್ದೇಶನಾಲಯವು (ಇಡಿ) ದೋಷಾರೋಪ ಪಟ್ಟಿಯಲ್ಲಿ ಸ್ಪಷ್ಟವಾಗಿ ತಿಳಿಸಿರುವುದರಿಂದ ಚುನಾವಣಾ ಆಯೋಗವು ಬಳ್ಳಾರಿ ಸಂಸದ ತುಕಾರಾಂ ಅವರನ್ನು ಕೂಡಲೇ ಸಂಸದ ಸ್ಥಾನದಿಂದ ವಜಾಗೊಳಿಸಬೇಕು ಎಂದು ವಿಧಾನಪರಿಷತ್ತಿನ  ಸದಸ್ಯ ಎನ್.ರವಿಕುಮಾರ್ ಆಗ್ರಹಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ್ದು ಅಂತರ್ ರಾಜ್ಯ ಭ್ರಷ್ಟಾಚಾರದ ಹಗರಣವಾಗಿದೆ. ನಿಗಮದ ಹಣವು ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಬಳಕೆ ಆಗಿರುವುದು ಸುಸ್ಪಷ್ಟ.

ನಿಗಮದ 187 ಕೋಟಿ ರು. ಹಗರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಅವರ ಪಾತ್ರದ ಬಗ್ಗೆ ಇಡಿ ದೋಷಾರೋಪ ಪಟ್ಟಿಯಲ್ಲಿ ತಿಳಿಸಿದೆ. ಆದರೆ, ಸಿದ್ದರಾಮಯ್ಯ ಮತ್ತು ಡಿ. ಕೆ.ಶಿವಕುಮಾರ್ ಇನ್ವೆಸ್ಟಿಗೇಶನ್ ಟೀಂ (ಎಸ್‌ಐಟಿ) ನಾಗೇಂದ್ರ ಹೆಸರು ಉಲ್ಲೇಖಿಸದೇ ಕ್ಲೀನ್ ಚೀಟ್ ನೀಡಿದೆ. ಇಬ್ಬರು ಅಧಿಕಾರಿಗಳ ಹೆಸರನ್ನಷ್ಟೇ ಉಲ್ಲೇಖಿಸಿದೆ ಎಂದು ಕಿಡಿಕಾರಿದರು

   

Related Articles

error: Content is protected !!